ಕೋಲ್ಚಾರು ಶ್ರೀ ಶಾರದಾಂಬ ಭಜನಾ ಮಂದಿರದ ವತಿಯಿಂದ ಮನೆ ಮನೆ ಭಜನಾ ಸಂಕೀರ್ತನೆಯು ಡಿ.16 ರಂದುಆರಂಭಗೊಂಡಿತು.
ಕೋಲ್ಚಾರು, ಕಣಕ್ಕೂರು ಕುಂಭಕೋಡು, ಕುಡೆಂಬಿ, ಪೈಂಬೆಚ್ಚಾಲ್ , ಮಾಣಿಮರ್ದು ಪರಿಸರದಲ್ಲಿ ಇರುವ ಮನೆಗಳಿಗೆ ಭಜನಾ ತಂಡವು ತೆರಳಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ದಿನವೊಂದಕ್ಕೆ ಸರಿ ಸುಮಾರು 10 ಮನೆಗಳಿಗೆ ಭೇಟಿ ನೀಡಿ ಭಜನೆಯನ್ನು ಮಾಡುವುದರೊಂದಿಗೆ ಧರ್ಮ ಜಾಗೃತಿಯ ಕಾರ್ಯವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ.ಈ ಸಂದರ್ಭದಲ್ಲಿ
ಭಜನಾ ಮಂದಿರದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಹಿರಿಯ ಭಜಕರು ಪಾಲ್ಗೊಳ್ಳುತ್ತಿದ್ದಾರೆ.