ಜೇಸಿಐ ಪಂಜ ಪಂಚಶ್ರೀ : ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ನೂತನ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಮತ್ತು ಪದಾಧಿಕಾರಿಗಳು ಪದ ಸ್ವೀಕಾರ

🔸ಸಾಮಾಜಿಕ ಕಾಳಜಿಯೊಂದಿಗೆ ವಿಶೇಷ ಕಾರ್ಯಕ್ರಮ ನೀಡುವ ಘಟಕ – ಅಭಿಲಾಶ್ ಬಿ.ಎ

.🔸ಅಚ್ಚುಕಟ್ಟಾಗಿ ಮುನ್ನಡೆಯುತ್ತಿರುವ ಸಂಸ್ಥೆ – ನೇಮಿರಾಜ ಪಲ್ಲೋಡಿ

🔸 ಇನ್ನಷ್ಟು ನಾಯಕರು ಸಮಾಜಕ್ಕೆ ಮೂಡಿ ಬರಲಿ- ಸಂತೋಷ್ ಶೆಟ್ಟಿ

ಜೇಸಿಐ ಪಂಜ ಪಂಚಶ್ರೀ ಇದರ ನೂತನ ಅಧ್ಯಕ್ಷ Jc HGF ವಾಚಣ್ಣ ಕೆರೆಮೂಲೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ.19 ಪಂಜ ಪ್ರಾ. ಕೃ. ಪ. ಸ. ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನಡೆಯಿತು.

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ಜೀವನ್ ಮಲ್ಕಜೆ ರವರು ಸಭಾಧ್ಯಕ್ಷತೆ ವಹಿಸಿದ್ದರು .

ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ Jc HGF ವಾಚಣ್ಣ ಕೆರೆಮೂಲೆ ಯವರ ‌ಸಭಾಧ್ಯಕ್ಷತೆ
ವಹಿಸಿದ್ದರು.


ಮುಖ್ಯ ಅತಿಥಿ ಜೇಸಿಐ ವಲಯಾಧ್ಯಕ್ಷ JCI ಸೆನೆಟರ್ ಅಭಿಲಾಶ್ ಬಿ.ಎ. ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ಪ್ರತಿ ವರ್ಷ ಹುಚ್ಚು ನಾಯಿ ನಿರೋಧಕ ಲಸಿಕೆ ಕಾರ್ಯಕ್ರಮ ಸೇರಿದಂತೆ ಅನೇಕ ಉತ್ತಮ ಸಾಮಾಜಿಕ ಕಾಳಜಿ , ಸಾರ್ವಜನಿಕರಿಗೆ ಕಾರ್ಯಕ್ರಮಗಳನ್ನು ನೀಡುತ್ತಿದೆ . ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಏರಲಿ .ವಲಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಲಿ.” ಎಂದು ಶುಭ ಹಾರೈಸಿದರು.

ಅತಿಥಿಯಾಗಿದ್ದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ Ln. ನೇಮಿರಾಜ್ ಪಲ್ಲೋಡಿ ಮಾತನಾಡಿ “ಜೇಸಿಐ ಪಂಜ ಪಂಚಶ್ರೀಯ ಫೌಂಡೇಶನ್ ಗಟ್ಟಿಯಾಗಿದೆ.ಅತ್ಯುತ್ತಮ ತರಬೇತುದಾರರಿದ್ದಾರೆ. ಇದರಲ್ಲಿ ಹಳೆ ಸದಸ್ಯರು, ಹೊಸ ಸದಸ್ಯರು ಇದ್ದು ಸಂಸ್ಥೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ.ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಏರಲಿ”. ಎಂದು ಶುಭ ಹಾರೈಸಿದರು.

ಅತಿಥಿಯಾಗಿದ್ದ ಜೇಸಿಐ ವಲಯ ಉಪಾಧ್ಯಕ್ಷ
JFF ಸಂತೋಷ್ ಶೆಟ್ಟಿ ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ಮಾದರಿ ಘಟಕ. ಇಲ್ಲಿ ವಿಶೇಷವಾಗಿ ಪೂರ್ವಾಧ್ಯಕ್ಷರುಗಳು ಸಂಪೂರ್ಣ ಸಹಕರಿಸುತ್ತಿದ್ದು ಉತ್ತಮವಾಗಿ ಘಟಕ ಬೆಳೆದಿದೆ.ಈ ಸಂಸ್ಥೆಯಿಂದ ಇನ್ನಷ್ಟು ನಾಯಕರು ಸಮಾಜಕ್ಕೆ ಮೂಡಿ ಬರಲಿ”. ಎಂದು ಶುಭ ಹಾರೈಸಿದರು. ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ‌ನಿಕಟಪೂರ್ವಾಧ್ಯಕ್ಷ, ವಲಯಾಧಿಕಾರಿ ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ನೂತನ ಕಾರ್ಯದರ್ಶಿ ಅಶ್ವಥ್ ಬಾಬ್ಲುಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಮುಂದಿನ ಕಾರ್ಯಕ್ರಮಗಳ ಬ್ಯಾನರ್ ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜೀವನ್ ಮಲ್ಕಜೆ ಸ್ವಾಗತಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.