ಡಿ.21 ರಂದು ತಂಟೆಪ್ಪಾಡಿ ಕಿ.ಪ್ರಾ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ

0

ಸಭಾ ಕಾರ್ಯಕ್ರಮ, ವಿವಿಧ ಮನೋರಂಜನಾ ಕಾರ್ಯಕ್ರಮ, ಯಕ್ಷಗಾನ ” ಗದಾಯುದ್ಧ”

ಕಳಂಜ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿ ಇದರ
ಹಳೆ ವಿದ್ಯಾರ್ಥಿ ಸಂಘದ
ಸುವರ್ಣ ಮಹೋತ್ಸವ ಡಿ.
21 ರಂದು ನಡೆಯಲಿದೆ.

ಅಂದು ಬೆಳಗ್ಗೆ ನಿವೃತ್ತ ಕೃಷಿ ಅಧಿಕಾರಿ ಮಹಾಬಲ ಗೌಡ ತಂಟೆಪ್ಪಾಡಿ ಧ್ವಜಾವರೋಹಣ ನಡೆಸಲಿದ್ದಾರೆ.


ಸಂಜೆ 6.30 ಸಭಾ ಕಾರ್ಯಕ್ರಮ ನಡೆಯಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕುl ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ,ಟಿ. ಮೇದಪ್ಪ ಗೌಡ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.


ಮಾಜಿ ವಿಧಾನ ಪರಿಷತ್ ಸದಸ್ಯ
ಅಣ್ಣಾ ವಿನಯಚಂದ್ರ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ನಿನಾದ ಸಾಂಸ್ಕೃತಿಕ ಕೇಂದ್ರದ ತಂಟೆಪ್ಪಾಡಿ ವಸಂತ ಶೆಟ್ಟಿ ಬೆಳ್ಳಾರೆ ಬಹುಮಾನ ವಿತರಣೆ ಮಾಡಲಿದ್ದಾರೆ. ವೇದಿಕೆಯಲ್ಲಿ
ಬಾಲಕೃಷ್ಣ ಬೇರಿಕೆ, ಶ್ರೀಮತಿ ಪ್ರೇಮಲತಾ ಇರಲಿದ್ದಾರೆ.


ಗೋಪಾಲಕೃಷ್ಣ ಕಿಲಂಗೋಡಿ, ಟಿ. ಮೇದಪ್ಪ ಗೌಡ ಇವರಿಗೆ ಸನ್ಮಾನ ನಡೆಯಲಿದೆ. ರಾಕೇಶ್, ಸಂದೀಪ್, ರೋಹಿತ್, ರಕ್ಷಿತಾ ಎಂ. ಬಿ., ಅರ್ಪಿತಾ, ಸಕೇತ್, ಶರ್ಮಿಳಾ ಗೌರನ ಸನ್ಮಾನ ಹಾಗೂ
ತನ್ನಿ ತಂಟೆಪ್ಪಾಡಿ, ಮೋನಿಷ್ ತಂಟೆಪ್ಪಾಡಿ ಅವರಿಗೆ ಗೌರವ ಪುರಷ್ಕಾರ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಗಂಟೆ 5-00ರಿಂದ
ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಮತ್ತು ಯೋಗಾಸನ ಪ್ರದರ್ಶನ ನಡೆಯಲಿದೆ. ರಾತ್ರಿ ಗಂಟೆ 7-30ರಿಂದ ಹಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸ್ವಸಹಾಯ ಸಂಘದ ಸದಸ್ಯರಿಂದ
ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದು
ರಾತ್ರಿ ಗಂಟೆ 9-00ರಿಂದ
ಯುವಕ ಮಂಡಲ (ರಿ) ಕಳಂಜ ಪ್ರವರ್ತಿತ ಹವ್ಯಾಸಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ
ಯಕ್ಷಗಾನ ಬಯಲಾಟ – ” ಗದಾಯುದ್ಧ” ನಡೆಯಲಿದೆ ಕಾರ್ಯಕ್ರಮ ಯಶಸ್ವಿಗೆ ಸರ್ವರೂ ಸಹಕರಿಸುವಂತೆ ಸಂಘಟಕರು ಕೋರಿದ್ದಾರೆ.