ಪರಿಷತ್ ಸದಸ್ಯತನದಿಂದ ಸಿ.ಟಿ. ರವಿ ಯವರನ್ನು ವಜಾಗೊಳಿಸಿ: ಗೀತಾ ಕೋಲ್ಚಾರು ಒತ್ತಾಯ
ಕರ್ನಾಟಕ ಘನ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿಯವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ಸ್ತ್ರೀ ಕುಲಕ್ಕೆ ಮಾಡಿದಅಪಮಾನವಾಗಿದೆ. ತಕ್ಷಣ ಅವರನ್ನು ವಿಧಾನ ಪರಿಷತ್ ಸದಸ್ಯತನದಿಂದ ವಜಾಗೊಳಿಸಬೇಕು ಎಂದು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರು ರವರು ಒತ್ತಾಯಿಸಿದ್ದಾರೆ.
ಹೆಣ್ಣು ಮಕ್ಕಳು ರಾಜಕೀಯದಲ್ಲಿ ಬರುವುದೇ ಅಪರೂಪ. ಅಧಿಕಾರ ಸ್ಥಾನಕ್ಕೆ ಹೋಗುವುದು ಬಹಳ ಕಷ್ಟ ಸಾಧ್ಯ. ಮಹಿಳೆಯ ವಿರುದ್ಧ ಇಂತಹ ನಿಂದನೀಯ ಮಾತುಗಳನ್ನು ಯಾವುದೇ ಸಮಾಜ ಒಪ್ಪುವುದಿಲ್ಲ. ಪರಿಷತ್ತಿನ ಕಲಾಪದಲ್ಲಿ ನಡೆದ ಈ ಘಟನೆ ಇಡೀ ಸಮಾಜ ತಲೆ ತಗಿಸುವಂತೆ ಮಾಡಿದೆ. ಸದನದ ಘನತೆಗೆ ಶಾಶ್ವತ ಕಪ್ಪು ಚುಕ್ಕೆ ತಂದಿರುತ್ತಾರೆ. ಇದನ್ನು ನಾವು ಖಂಡಿಸುವುದಾಗಿ ಅವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.