ಮರ್ಕಂಜ ಗ್ರಾಮದ ಕುದ್ಕುಳಿ ಹರಿಪ್ರಸಾದ್ ಗೌಡ ಎಂಬವರು ಶ್ವಾಸಕೋಶ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸೀಸ್ ಗೆ ತುತ್ತಾಗಿದ್ದಾರೆ. ಈಗಾಗಲೇ ಸುಮಾರು 2 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದ್ದು, ಇನ್ನು ರೂ. 3 ಲಕ್ಷದಷ್ಟು ಚಿಕಿತ್ಸೆಗೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹರಿಪ್ರಸಾದ್ ರವರ ಮನೆಯವರು ತಿಳಿಸಿದ್ದಾರೆ.
ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮನೆಗೆ ಆಧಾರ ಸ್ಥಂಭವಾಗಿರಬೇಕಾದ ಹರಿಪ್ರಸಾದ್ ರವರು ಆಸ್ಪತ್ರೆಯಲ್ಲಿತುವ ಕಾರಣ ಮತ್ತು ಅವರು ಆರ್ಥಿಕವಾಗಿ ಸದೃಢರಾಗಿರದ ಕಾರಣ ಇವರ ಚಿಕಿತ್ಸೆ ವೆಚ್ಚ ಭರಿಸಲು ಮನೆಯವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹೃದಯರು ಧನಸಹಾಯ ಮಾಡುವುದರ ಮೂಲಕ ನೊಂದ ಜೀವಕ್ಕೆ ಬೆಳಕಾಗಬೇಕಾಗಿದೆ.
ಹರಿಪ್ರಸಾದ್ ರವರ ಬ್ಯಾಂಕ್ ಅಕೌಂಟ್ ಮಾಹಿತಿ ಕೆಳಗೆ ನೀಡಲಾಗಿದೆ.