ಬೆಳ್ಳಾರೆಯಲ್ಲಿ ಸಿದ್ಧಿ,ಸಮಾದಿ ಯೋಗ ಶಿಬಿರ ಪ್ರಾರಂಭ

0

ಋಷಿ ಪ್ರಭಾಕರ ಗುರೂಜಿಯವರ ಆಶೀರ್ವಾದದಿಂದ, ಶ್ರೀ ಮೋಹನ ರೆಡ್ಡಿ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲಿಕಾರ್ಜುನ ಗುರೂಜಿ ಬೆಂಗಳೂರು, ಇವರ ಸಹಕಾರದೊಂದಿಗೆ
ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ, ಬೆಳ್ಳಾರೆ, ಜೆಸಿಐ ಬೆಳ್ಳಾರೆ ಪತಂಜಲಿ ಯೋಗ ಸಮಿತಿ ಸುಳ್ಯ, ಬೆಳ್ಳಾರೆ. ಋಷಿ ಯೋಗ ಇಂಟರ್‌ನ್ಯಾಷನಲ್ ಫೌಂಡೇಶನ್ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ನಿವೇದಿತಾ ಸಂಚಲನಾ ಸಮಿತಿ ಬೆಳ್ಳಾರೆ ಇವರ ಸಹಭಾಗಿತ್ವದಲ್ಲಿ “ಆನಂದಮಯ ಆರೋಗ್ಯಮಯ ಜೀವನಕ್ಕಾಗಿ”
ಸಿದ್ಧಿ, ಸಮಾಧಿ ಯೋಗ ಶಿಬಿರ ಧ್ಯಾನ, ಪ್ರಾಣಾಯಾಮ, ಆಹಾರಕ್ರಮ ವ್ಯಕ್ತಿತ್ವ ವಿಕಾಸ
ಉಚಿತ ಮಾರ್ಗದರ್ಶನ ಶಿಬಿರದ ಮೂರನೇ ಬ್ಯಾಚ್ ಪ್ರಾರಂಭಗೊಂಡಿದೆ.
ಹಲವು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ದಿಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲಾಗುವದು. ಈ ಮೂಲಕ ನಿಮ್ಮ ಜೀವನದಲ್ಲಿ ಆನಂದ, ಶಾಂತಿ, ನೆಮ್ಮದಿ ಪಡೆಯಲು ಸಾಧ್ಯವಾಗುವುದು.
ದೀರ್ಘಾವಾದಿ ಖಾಯಿಲೆಗಳು, ರಕ್ತದೊತ್ತಡ, ಆಸ್ತಮಾ, ಮಧುಮೇಹ, ಗ್ಯಾಸ್ಟ್ರಿಕ್, ಸಂಧಿವಾತ ನಿವಾರಣೆ ಗೊಳಿಸಲು ಸಾಧ್ಯವಾಗುವುದು.ಏಕಾಗ್ರತೆ, ಜ್ಞಾಪಕಶಕ್ತಿ, ಗ್ರಹಣ ಶಕ್ತಿ ಮತ್ತು ಮನಸ್ತೈರ್ಯವನ್ನು ವೃದ್ಧಿಗೊಳಿಸಲು ಸಾಧ್ಯವಾಗುವುದು.


ಉದ್ವೇಗ,ಭಯ,ಕೋಪ,ಮರೆವು,ನಿದ್ರಾಹೀನತೆಯಿಂದ ಮುಕ್ತಿಪಡೆಯಲು ಸಾಧ್ಯವಾಗುವುದು.
ಸಾಂಕ್ರಮಿಕ ಖಾಯಿಲೆಗಳಿಂದ ಮುಕ್ತಿ ಪಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದು. ಪರಿಚಯ ಕಾರ್ಯಕ್ರಮಕ್ಕಾಗಿ ಸಂಪರ್ಕಿಸಿರಿ :
ಕಲ್ಪವೃಕ್ಷ ಆರ್ಕೆಡ್ ಸಭಾ ಭವನ ಬೆಳ್ಳಾರೆ ಮುಖ್ಯ ರಸ್ತೆ.
ವಿಚಾರಿಸಿ : ಎಂ.ಮಾಧವ ಗೌಡ 9731765545
ಶ್ರೀರಾಮ ಪಾಟಾಜೆ : 9902050158
ಭರತ್ ಕುಮಾರ್ : 7259094269
ವಿಭಕೇಸರಿ :
8792421573