ಗೌರವ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಕಳಂಜ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿ ಇದರ
ಹಳೆ ವಿದ್ಯಾರ್ಥಿ ಸಂಘದ
ಸುವರ್ಣ ಮಹೋತ್ಸವ ಡಿ.
21 ರಂದು ನಡೆಯಿತು.
ಸಂಜೆ ಸಭಾ ಕಾರ್ಯಕ್ರಮ ನಡೆದಿದ್ದು ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ,ಟಿ. ಮೇದಪ್ಪ ಗೌಡ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ವಿಧಾನ ಪರಿಷತ್ ಸದಸ್ಯ
ಅಣ್ಣಾ ವಿನಯಚಂದ್ರ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ವೇದಿಕೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಕಳಂಜ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದ ನಿವೃತ್ತ ಕೃಷಿ ಅಧಿಕಾರಿ ಮಹಾಬಲ ಗೌಡ ತಂಟೆಪ್ಪಾಡಿ. ನಿವೃತ್ತ ಶಿಕ್ಷಕ
ಗೋಪಾಲಕೃಷ್ಣ ಕಿಲಂಗೋಡಿ,
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೋಹಿಣಿ, ಕ್ರೀಡಾ ಸಂಚಾಲಕ ಅನಂತ ಕೃಷ್ಣ ತಂಟೆಪ್ಪಾಡಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗಣೇಶ್ ಮುದ್ದಾಜೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಷಪ್ಪ ಕಿಲಂಗೋಡಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ
ನಿವೃತ್ತ ಶಿಕ್ಷಕ ಟಿ. ಮೇದಪ್ಪ ಗೌಡ ಹಾಗೂ ಗೋಪಾಲಕೃಷ್ಣ ಇವರಿಗೆ ಸನ್ಮಾನ ನಡೆಯಿತು. ಈ ಸಂದರ್ಭ
ರಾಕೇಶ್, ಸಂದೀಪ್ ಬಂಬಿಲ, ರೋಹಿತ್ ಕಿಲಂಗೋಡಿ, ರಕ್ಷಿತಾ ತಂಟೆಪ್ಪಾಡಿ, ಅರ್ಪಿತಾ ಕಿಲಂಗೋಡಿ, ಸಕೇತ್ ಕಿಲಂಗೋಡಿ, ಸಂದ್ಯಾ ಕೆ, ಶರ್ಮಿಳಾ ಮಡಪ್ಪಾಡಿ ಇವರುಗಳಿಗೆ ಗೌರನ ಸನ್ಮಾನ ನಡೆಯಿತು. ಯೋಗ ಪಟುಗಳಾದ ತನ್ನಿ ತಂಟೆಪ್ಪಾಡಿ, ಮೋನಿಷ್ ತಂಟೆಪ್ಪಾಡಿ ಅವರಿಗೆ ಗೌರವ ಪುರಷ್ಕಾರ ನಡೆಯಿತು.
ಶ್ರೀಮತಿ ಸುಮಾ ವಿ ಆಚಾರ್ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಶೋದಾ ಸ್ವಾಗತಿಸಿದರು.
ನಾರಾಯಣ ಕಿಲಂಗೋಡಿ ಪ್ರವಾವಿಕ ಮಾತುಗಳನ್ನು ಆಡಿದರು. ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ
ಪ್ರಶಾಂತ್ ಕೆ ವರದಿ ವಾಚಿಸಿದರು.
ಸಂಪ್ರೀತಾ ಬಹುಮಾನಿತರ ಪಟ್ಟಿ ವಾಚಿಸಿದರು.
ಪ್ರಶಾಂತ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಮತ್ತು ಯೋಗಾಸನ ಪ್ರದರ್ಶನ ನಡೆಯಿತು. ರಾತ್ರಿ ಹಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸ್ವಸಹಾಯ ಸಂಘದ ಸದಸ್ಯರಿಂದ
ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದು ಬಳಿಕ ರಾತ್ರಿ ಯುವಕ ಮಂಡಲ ಕಳಂಜ ಪ್ರವರ್ತಿತ ಹವ್ಯಾಸಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ
ಯಕ್ಷಗಾನ ಬಯಲಾಟ – ” ಗದಾಯುದ್ಧ” ನಡೆಯಿತು.