ವಾಹನ ಸವಾರರು ಮತ್ತು ಪಾದಾಚಾರಿಗಳ ಪರದಾಟ
ಸುಳ್ಯದ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ರಸ್ತೆಯಲ್ಲಿ ಅಳವಡಿಸಿರುವ ಇಂಟರ್ಲಾಕ್ ಗಳು ಅವ್ಯವಸ್ಥೆಗೊಂಡಿದ್ದು ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮತ್ತು ನಡೆದಾಡುವ ಸಾರ್ವಜನಿಕರು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು ಈ ಅವ್ಯವಸ್ಥೆಯ ಬಗ್ಗೆ ತಲೆ ಕೆಡಿಸುವವರು ಯಾರು ಇಲ್ಲದಂತೆ ಆಗಿದೆ.
ಇಲ್ಲೇ ಪಕ್ಕದಲ್ಲಿ ಸರ್ಕಾರಿ ಜೂನಿಯರ್ ಕಾಲೇಜ್ ಇದ್ದು ಅಲ್ಲದೆ ಕೆ ವಿ ಜಿ ಶಿಕ್ಷಣ ಸಂಸ್ಥೆಗೆ ತೆರಳುವ ನೂರಾರು ವಾಹನಗಳು ಮತ್ತು ರಸ್ತೆಯಲ್ಲಿ ನಡೆದಾಡುವ ನೂರಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.
ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಕೆಗೆ ಗುಂಡಿ ತೆಗೆಯುವ ಸಂದರ್ಭ ಈ ಇಂಟರ್ಲಾಕ್ ಗಳನ್ನು ತೆಗೆಯಲಾಗಿತ್ತು. ಬಳಿಕ ಕಳೆದ ೩,೪ ತಿಂಗಳುಗಳಿಂದ ಅವುಗಳನ್ನು ಅಲ್ಲೇ ಬಿಟ್ಟು ಹೋಗಿದ್ದು ಇದೀಗ ಅವ್ಯವಸ್ಥೆಯ ಗೂಡಾಗಿ ಈ ರಸ್ತೆ ಮಾರ್ಪಟ್ಟಿದೆ.
ಕನಿಷ್ಠಪಕ್ಷ ಅವುಗಳನ್ನು ಅಲ್ಲೇ ಪಕ್ಕದಲ್ಲಿ ಎಲ್ಲಾದರೂ ಜೋಡಿಸಿ ಇಡುವ ಕಾರ್ಯವನ್ನು ಮಾಡದೆ ಇದ್ದು ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ.