ಸುಳ್ಯ ದುಗ್ಗಲಡ್ಕ ಸಯ್ಯಿದ್ ಫಕ್ರುದ್ದೀನ್ ತಂಙಳ್
21 ನೇ ಮಖಾಂ ಉರೂಸ್ ಹಾಗೂ ಜಂಇಯ್ಯತು ತರ್ಬಿಯತಿಲ್ ಬುಖಾರಿಯ್ಯ ಇದರ 31 ನೇ ಖುತಿಬಿಯ್ಯತ್ ಡಿ.27ರಿಂದ 30 ರವರೆಗೆ ನಡೆಯಲಿದೆ.
ಡಿ.27ರಂದು ಜುಮುಅ ನಮಾಜಿನ ಬಳಿಕ ಮಖಾಂ ಝಿಯಾರತ್ ಬಹು ಮಾಹಿನ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಲಿದೆ.
ವಿದ್ಯಾರ್ಥಿ ಫೆಸ್ಟ್ ಉದ್ಘಾಟನೆಯನ್ನು ಬಹು. ಮಾಹಿನ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ.
ಡಿ.28 ರಂದು ಧ್ವಜಾರೋಹಣವನ್ನು ಬಹು. ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದು
ಉರೂಸ್ ಉದ್ಘಾಟನೆಯ
ಅಧ್ಯಕ್ಷತೆಯನ್ನು ಬಹು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ವಹಿಸಲಿದ್ದಾರೆ.
ಉದ್ಘಾಟನೆಯನ್ನುಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದಾರೆ.
ರಾತ್ರಿ 7:30 ಕ್ಕೆ
ಮುಖ್ಯ ಪ್ರಭಾಷಣೆಯನ್ನು ಮುಹಮ್ಮದ್ ಹನೀಫ್ ನಿಝಾಮಿ ಮಾಡಲಿದ್ದಾರೆ.
ಡಿ.29ರಂದು ಸಂಜೆ 5:00 ಕ್ಕೆ ಮಹಾದ್ವಾರ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನೆರವೇರಿಸಲಿದ್ದಾರೆ.
ಸಂಜೆ 7:30ಕ್ಕೆ ನೂರೆ ಅಜ್ಮೀರ್
ಬಹು ಸಯ್ಯಿದ್ ಜಲಾಲುದ್ದೀನ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ.
ಧಾರ್ಮಿಕ ಪ್ರಭಾಷಣೆ ರಾತ್ರಿ 10 ಗಂಟೆಗೆ ನಡೆಯಲಿದ್ದು,
ಅಧ್ಯಕ್ಷತೆಯನ್ನು ಬಹು. ಸಯ್ಯಿದ್ ಸೈಫುಲ್ಲಾ ತಂಙಳ್ ಉಡುಂಬುಂತಲ,
ಉದ್ಘಾಟನೆಯನ್ನುಬಹು ಸಯ್ಯಿದ್ ಬಾತಿಷ ತಂಙಳ್,
ಮುಖ್ಯ ಪ್ರಭಾಷಣೆಯನ್ನು ಬಹು ವಲಿಯುದ್ದೀನ್ ಫೈಝಿ ನೆರವೇರಿಸಲಿದ್ದಾರೆ.
ಡಿ.30 ರಾತ್ರಿ 9 ಗಂಟೆಗೆ ಖತಂ ದುಆ ನಡೆಯಲಿದೆ.
ನೇತೃತ್ವವನ್ನು ಬಹು ಸಯ್ಯಿದ್ ಜಲಾಲುದ್ದೀನ್ ತಂಙಳ್ ವಹಿಸಲಿದ್ದಾರೆ.
ಧಾರ್ಮಿಕ ಪ್ರಭಾಷಣೆ ರಾತ್ರಿ 10:00 ಗಂಟೆಗೆ ನಡೆಯಲಿದ್ದು,
ಅಧ್ಯಕ್ಷತೆಯನ್ನು ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ನೆರವೇರಿಸಲಿದ್ದು,
ಮುಖ್ಯ ಪ್ರಭಾಷಣೆಯನ್ನು ಬಹು. ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮಾಡಲಿದ್ದಾರೆ.ಎಂದು ಮಸೀದಿ ಸಮಿತಿಯ ಪ್ರ.ಕಾರ್ಯದರ್ಶಿ ಹಂಝ ಅಜ್ಮೀರ್ ತಿಳಿಸಿದ್ದಾರೆ.