ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಕಂಡು ಬಂದ ಅನಾಥ ಪುಟ್ಟ ಮಗು

0

ಸುಳ್ಯ ಪೋಲಿಸ್ ಠಾಣೆಯಲ್ಲಿ ಮಗುವಿನ ಆರೈಕೆ

ಅನಾಥ ಪುಟ್ಟ ಮಗುವೊಂದು ಪೋಷಕರಿಂದ ಬೇರೆಯಾಗಿ ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಕಂಡು ಬಂದಿದೆ. ಅಂದಾಜು 3 ವರ್ಷ ಪ್ರಾಯದ
ಮಗು ರಸ್ತೆಯಲ್ಲಿ ಅಳುವುದನ್ನು ಕಂಡು ಸ್ಥಳೀಯ ಸಮಾಜ ಸೇವಕ ಗೋಕುಲ್ ದಾಸ್ ರವರು ವಿಚಾರಿಸಿ ಪೋಲಿಸ್ ಠಾಣೆಗೆ ಕರೆ ತಂದು ಪೋಲಿಸರ ಸಮಕ್ಷಮದಲ್ಲಿ ಒಪ್ಪಿಸಿದ್ದಾರೆ. ಇದೀಗ ಮಗುವನ್ನು ಪೋಲಿಸ್ ಠಾಣೆಯಲ್ಲಿ ಕೂರಿಸಿಕೊಂಡು ಪೋಲಿಸರು ಆರೈಕೆ ಮಾಡುತ್ತಿದ್ದಾರೆ.


ಮಗು ಸರಿಯಾಗಿ ಮಾತನಾಡಲು ಸಾಧ್ಯವಾಗದಿರುವುದರಿಂದ ಸರಿಯಾದ ವಿಳಾಸ ಗೊತ್ತಾಗುತ್ತಿಲ್ಲ.
ಸಂಬಂಧಪಟ್ಟವರು ಗುರುತಿಸಿ ಸುಳ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.