ಜಿಲ್ಲಾಧಿಕಾರಿಯನ್ನು ಭೇಟಿಯಾದ ರೋಟರಿ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು

0

ಅಧಿಕಾರದ ಜೊತೆಗೆ ಆದರ್ಶ ವ್ಯಕ್ತಿತ್ವವೂ ಮುಖ್ಯ ಎಂದು ನಿರೂಪಿಸಿದ ಜಿಲ್ಲಾಧಿಕಾರಿಗಳು


ರೋಟರಿ ಪ್ರೌಢಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಾದ ನಿನಾದ್, ಸಮರ್ಥ್, ಅಖಿಲ್ ಕೆ.ವಿ ಹಾಗೂ ಗೈಡ್ ವಿದ್ಯಾರ್ಥಿನಿಯರಾದ ವಂಶಿಕಾ , ಕು.ನಿರೀಕ್ಷಾ.ಸುಳಾಯ ಹಾಗೂ ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಡಿಸೆಂಬರ್ 22ರಂದು , ಗೈಡ್ ವಿದ್ಯಾರ್ಥಿನಿ ಕು.ನಿರೀಕ್ಷಾ ಪ್ರಕಟಿಸಿದ ಸ್ವರಚಿತ ಕವನ ಸಂಕಲನ ನನ್ನ ಮನಸು ನನ್ನ ಕನಸು ಪುಸ್ತಕವನ್ನು ದಕ್ಷಿಣ ಕನ್ನಡದ ಮಾನ್ಯ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಅವರಿಗೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಕವನ ಸಂಕಲನ ಪುಸ್ತಕವನ್ನು ನೀಡಿದಾಗ ಪ್ರೀತಿಯಿಂದ ಸ್ವೀಕರಿಸಿ, ಕವನವೊಂದನ್ನು ಓದಿ, ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳೆಲ್ಲರಿಗೂ ಶುಭ ಹಾರೈಸಿದರು.

ಫಲವಸ್ತುಗಳನ್ನೂ ನೀಡಿ ಮಕ್ಕಳ ಮೇಲಿರುವ ಪ್ರೀತಿ ವಾತ್ಸಲ್ಯವನ್ನು ವ್ಯಕ್ತಪಡಿಸಿದರು.