ಪರಿವಾರಕಾನ ರವೀಂದ್ರ ಪೂಜಾರಿ ಯವರ ಮನೆಯಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆ

0

ಪರಿವಾರಕಾನ ರವೀಂದ್ರ ಪೂಜಾರಿ ಯವರ ರೇವತಿ ನಿಲಯದಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆಯು ಡಿ.24 ರಂದು ನಡೆಯಿತು. ಮಂಗಳೂರಿನ ದೈವದ ಪಾತ್ರಿ ರಾಜೇಂದ್ರ ಬಾಜಾರ್ ರವರ ನೇತೃತ್ವದಲ್ಲಿ ದರ್ಶನ ಸೇವೆಯಾಗಿ ಪ್ರಸಾದವಿತರಣೆಯಾಯಿತು. ಮಧ್ಯಸ್ಥರಾಗಿ ಅಭಿ ಗಾಣಿಗ ಗಂಜಿಮಠ ರವರು ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ರೇವತಿ ರವೀಂದ್ರ ಪೂಜಾರಿ , ರಂಜಿತ್ ಪೂಜಾರಿ ಕೃತಿಕಾ ದಂಪತಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.