ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಜ್ರೋಳಿ ಬೆಳ್ಳಾರೆ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ 10 ನೇ ವರ್ಷದ ದೀಪೋತ್ಸವವು ಡಿ.28 ಮತ್ತು ಡಿ.29 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.
ಡಿ.28 ರಂದು ಬೆಳಿಗ್ಗೆ ಸ್ಥಳ ಶುದ್ಧೀಕರಣ ಮತ್ತು ಗಣಹೋಮ ನಡೆಯಿತು.
ಸಂಜೆ ಗೌರಿಹೊಳೆಯಿಂದ ಪಾಲ್ ಕೊಂಬು ಮೆರವಣಿಗೆ ನಡೆಯಿತು.
ಬೆಳ್ಳಾರೆ ಮಕ್ಕಳ ಕುಣಿತ ಭಜನಾ ತಂಡದ ವತಿಯಿಂದ ಕುಣಿತ ಭಜನೆ ನಡೆಯಿತು.
ಬಳಿಕ ರಾತ್ರಿ ಅಗ್ನಿಸ್ಪರ್ಶ ನಡೆಯಿತು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಅಯ್ಯಪ್ಪ ವೃತಧಾರಿಗಳಿಂದ ಅಪ್ಪಸೇವೆ ನಡೆಯಿತು.
ಬಳಿಕ ರಾತ್ರಿ ತುಳು ಯಕ್ಷಗಾನ ಬಯಲಾಟ ‘ಸರ್ಪಸಿರಿಮುಡಿ’ನಡೆಯಿತು.
ಡಿ.29 ರಂದು ಬೆಳಿಗ್ಗೆ ಕೆಂಡಸೇವೆ ನಡೆಯಿತು.
ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಮತ್ತು ಸರ್ವ ಸದಸ್ಯರು ಹಾಗೂ ಗಂಗಾಧರ ಗುರುಸ್ವಾಮಿ ಮತ್ತು ಶಿಷ್ಯ ವೃಂದದವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.