ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

0

ಅಧ್ಯಕ್ಷರಾಗಿ ಸುಧಾಕರ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ವೆಂಕಪ್ಪ ನಾಯ್ಕ ದೇರ್ಕಜೆ ಅವಿರೋಧ ಆಯ್ಕೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಧಾಕರ ಕಾಮತ್
ಹಾಗೂ ಉಪಾಧ್ಯಕ್ಷರಾಗಿ ವೆಂಕಪ್ಪ ನಾಯ್ಕ ದೇರ್ಕಜೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜ.4ರಂದು ನಡೆದ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಧಾಕರ ಕಾಮತ್
ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಪ್ಪ ನಾಯ್ಕ ದೇರ್ಕಜೆ ಯವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಇವರಿಬ್ಬರ ಆಯ್ಕೆ ಅವಿರೋಧವಾಗಿ ನಡೆಯಿತು.

ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು.

ಅಧ್ಯಕ್ಷತೆಗೆ ಕಾಮತ್ ರವರ ಹೆಸರನ್ನು ನಿರ್ದೇಶಕ ಸುನಿಲ್ ಅಕ್ಕಿಮಲೆ ಸೂಚಿಸಿದ್ದರು.
ಸಂಘದ ನಿರ್ದೇಶಕ ನಿರಂಜನ್ ಬೊಳುಬೈಲ್ ಇದನ್ನು ಅನುಮೋದಿಸಿದರು.

ಉಪಾಧ್ಯಕ್ಷತೆಗೆ ವೆಂಕಪ್ಪ ನಾಯ್ಕರ ಹೆಸರನ್ನು ನಿರ್ದೆಶಕಿ ಶ್ರೀಮತಿ ದಮಯoತಿ ಸೂಚಿಸಿ, ನಿರ್ದೇಶಕಿ ವಿನುತಾ ಸಾರಕೂಟೇಲು ಅನುಮೋದಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿದಂತೆ ಅನೇಕರು ಅಭಿನಂದಿಸಿ ಮಾತನಾಡಿದರು.

ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.