ಸುಳ್ಯ ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಸಂಘದ ಸಂಚಾಲಕ ಜಯಂತ ಶೇಟ್ ರವರ ಅಧ್ಯಕ್ಷತೆಯಲ್ಲಿ ಜ. 6 ರಂದು ನಡೆಯಿತು.
ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಹಿರಿಯ ಉದ್ಯಮಿ ಕೃಷ್ಣ ಕಾಮತ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಉಮೇಶ್ ಪಿ.ಕೆ, ದೇವಸ್ಥಾನದ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ನ.ಪಂ.ಸದಸ್ಯೆ ಕಿಶೋರಿ ಶೇಟ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಸಾಧಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತ ಗೋಕುಲ್ ದಾಸ್, ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ, ಉದ್ಘೋಷಕ ಗಿರೀಶ್ ಕುಂಟಿನಿ ಯವರನ್ನು ಶಾಲು ಹಾರ ಹಾಗೂ ಫಲಪುಷ್ಪ ಸ್ಮರಣಿಕೆ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.
ಶಿಕ್ಷಕ ದೇವಿಪ್ರಸಾದ್ ಕಾಯರ್ತೋಡಿ ಪ್ರಾರ್ಥಿಸಿದರು. ಸತೀಶ್ ಕಾಟೂರು ಪ್ರಾಸ್ತಾವಿಕ ಮಾತನಾಡಿದರು. ಜಯಂತ ಶೇಟ್ ಸ್ವಾಗತಿಸಿದರು.
ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಚೆನ್ನಕೇಶವ ಕಲಾ ಸಂಘದಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ ಪ್ರದರ್ಶನ ಮತ್ತು ಪಟ್ಟಾಭಿರಾಮ ರಿಂದ ಮಿಮಿಕ್ರಿ ಪ್ರದರ್ಶನವಾಯಿತು. ನಂತರ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಕಲಾವಿದರಿಂದ ಕಥೆ ಎಡ್ಡೆಂಡು ತುಳು ನಾಟಕ ಪ್ರದರ್ಶನವಾಯಿತು.