ಬೆಳೆಯುತ್ತಿರುವ ಪೈಚಾರ್ ಗೆ ಮತ್ತೊಂದು ಕೊಡುಗೆ

0

ಬೆಳೆಯುತ್ತಿರುವ ಪೈಚಾರ್ ಗೆ ಮತ್ತೊಂದು ಕೊಡುಗೆಯಾಗಿ ಟೀ & ಜ್ಯೂಸ್ ಲ್ಯಾಬ್ ಶುಭಾರ0ಭಗೊ0ಡಿದೆ. ಸಂಸ್ಥೆಯನ್ನು ಜ.6 ರಂದು ಅಬ್ದುಲ್ಲ ಸುಳ್ಯಕ್ಕಾರ್ಸ್ ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಸತ್ತಾರ್ ಪೈಚಾರ್, ಆರ್ ಬಿ ಬಶೀರ್ , ಸಾಲಿ ಪೈಚಾರ್, ಬದ್ರುದ್ದೀನ್ ಕಾವೇರಿ , ನಜೀರ್ ಶಾಂತಿನಗರ ಹಾಗೂ
ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್, ಗೀತಾ ಗೋಪಿನಾಥ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು ಒಳಗಡೆ ಫ್ಯಾಮಿಲಿ ರೂಮ್ ಹಾಗೂ ಕಾಲೇಜ್ ಸ್ಟೂಡೆಂಟ್ ಗಳಿಗೆ, ಪ್ರವಾಸಿಗರಿಗೆ ಹೊರಾಂಗಣ ಕೂತು ವಿಶ್ರಾಂತಿಯಿಂದ ತಿನಿಸುಗಳನ್ನು ಸೇವಿಸಲು ಪ್ರತ್ಯೇಕ ವ್ಯವಸ್ಥೆ ಇದೆ.

ಲ್ಯಾಬ್ ಸ್ಪೆಷಲ್ ಆಗಿ ಇಲ್ಲಿ ಮಲಬಾರ್ (ಪಾಲಡ ಪಂಚ್) ಐಸ್ ಕ್ರೀಮ್ ಗಳು, ಅವಿಲ್ ಮಿಲ್ಕ್, ಚೈನೀಸ್ ಐಟಂಗಳು, ಚಿಕನ್ ಟಿಕ್ಕಾ, ಕಬಾಬ್ , ನೂಡಲ್ಸ್ , ಚಿಕನ್ ಬರ್ಗರ್, ಚಿಕನ್ ರೋಲ್, ಜ್ಯೂಸ್ ಐಟಂಗಳು, ಟೀ, ಮಸಾಲಾಪುರಿ , ಪಾನಿಪುರಿಗಳು ಸೇರಿದಂತೆ ಏ ಟು ಝೆಡ್ ಐಟಂಗಳು ಲಭ್ಯ.

ಇದರೊಂದಿಗೆ ಖರ್ಜೂರ ಉಪ್ಪಿನಕಾಯಿ , ಮದುವೆ ಸಮಾರಂಭಗಳಿಗೆ ಪಾಯಸ ಸೇರಿದಂತೆ ತರಕಾರಿ ಅಡುಗೆಗಳನ್ನು ತಯಾರಿಸಿಕೊಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.