ರಾಜ್ಯ ಸರಕಾರ ಸಾರಿಗೆ ಬಸ್ ದರವನ್ನು ಏಕಾಏಕಿ 15% ಏರಿಸಿರುವುದನ್ನು ವಿರೋಧಿಸಿ SDPI ರಾಜ್ಯದಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯ ಭಾಗವಾಗಿ SDPI ಸುಳ್ಯ ಬ್ಲಾಕ್ ಸಮಿತಿಯು ಸುಳ್ಯದ ಗಾಂಧಿ ಪ್ರತಿಮೆಯ ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮೀರಾಝ್ ಸುಳ್ಯ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತು.
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿಗಳಾದ ಸಿದ್ದಿಕ್ ಕೊಡಿಯಮ್ಮೆ ಸ್ವಾಗತಿಸಿದರು.
ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರೂ, ಮಾಧ್ಯಮ ಉಸ್ತುವಾರಿಗಳೂ ಆದ ಅಶ್ರಫ್ ಟರ್ಲಿ ಯವರು ಮಾತನಾಡಿ, ಕಾಂಗ್ರೆಸ್ ಸರಕಾರವು ಹಲವಾರು ಉಚಿತ ಕೊಡುಗೆಗಳನ್ನು ಚುನಾವಣಾ ಪೂರ್ವದಲ್ಲಿ ಜನರಿಗೆ ವಾಗ್ದಾನ ಮಾಡಿ ಅಧಿಕಾರದ ಗದ್ದುಗೆಯನ್ನು ಏರಿತು, ಈಗ ಸರಕಾರದ ಖಜಾನೆಯೂ ಖಾಲಿಯಾಗಿದೆ, ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಬಹುದೊಡ್ಡ ಹೊರೆಯಾಗಿದೆ,
ಇದನ್ನು ಸರಿದೂಗಿಸಲು ಸರಕಾರ ಬಡ ಮತ್ತು ಮಧ್ಯಮ ವರ್ಗದವರ ಬೆನ್ನಿನ ಮೇಲೆ ಗೆರೆಯನ್ನು ಹಾಕುತ್ತಿದ್ದಾರೆ. ದಿನಗೂಲಿ ಮಾಡುವ ಕಾರ್ಮಿಕ ಬಡ ವರ್ಗದವರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿದೆ. ಈ ಕೂಡಲೇ 15% ಏರಿಸಿದ ಪ್ರಯಾಣದರವನ್ನು ರದ್ದು ಮಾಡಬೇಕೆಂದು ಮನವಿ ಮಾಡಿದರು.
ಬಸ್ ಪ್ರಯಾಣ ದರವನ್ನು 15% ಏರಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಸ್ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷರೂ , ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ.ಎ ಸವಣೂರು ಸಾಂದರ್ಭಿಕವಾಗಿ ಮಾತನಾಡಿ,
ಸರಕಾರದ ತೀರ್ಮಾನದ ವಿರುದ್ಧ ಹರಿ ಹಾಯ್ದರು.
ಸರಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬರದಲ್ಲಿ , ತನ್ನ ಖಜಾನೆಯ ಸಾಮರ್ಥ್ಯವನ್ನು ಅಳೆಯಲು ವಿಫಲವಾಗಿದೆ. ಈಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಅದನ್ನು ಸರಿ ಮಾಡಲು ಬಡವರ ಕಡೆ ಮುಖ ಮಾಡಿದೆ.
ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿದ್ದು ಕೂಲಿ ಕಾರ್ಮಿಕರ ದೈನಂದಿನ ಖರ್ಚಿನ ಮೇಲೆ ನೇರ ಪರಿಣಾಮ ಬೀರಲಿದೆ ಎಂದು
ಅಭಿಪ್ರಾಯ ಪಟ್ಟರು.
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾದ ಅಡ್ವಕೇಟ್ ಅಬ್ದುಲ್ ರಶೀದ್ ಗೂನಡ್ಕ ವಂದನಾರ್ಪಣೆಯನ್ನು ಮಾಡಿದರು,
ಸುಳ್ಯ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ, ಕಾರ್ಯದರ್ಶಿ ರಫೀಕ್ ಎಂ ಎಸ್, ಸುಳ್ಯ ಬ್ಲಾಕ್ ಜೊತೆ ಕಾರ್ಯದರ್ಶಿ ಶಾಕಿರ್ ಪ್ಲಾಸ್ಟೋ, ಸದಸ್ಯರಾದ ಸಿದ್ದೀಕ್ ಸಿ ಎ, ಅಜೀಜ್ ಕಚ್ಚು ,ಅಬ್ದುಲ್ ರಹಮಾನ್ ಅಡ್ಕಾರ್, ಅಲ್ತಾಫ್ ಕಲ್ಚರ್ಪೆ, ರಹೀಂ ಪೆರಾಜೆ, ಮುಸ್ತಫ ಚೆಂಗಳ
ಮುಂತಾದವರು ಉಪಸ್ಥಿತರಿದ್ದರು.
ಫಾರೂಕ್ ಕಾನಕ್ಕೋಡ್ ನಿರೂಪಿಸಿದರು.