ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ದ್ವಾರಕಾನಗರ ಶ್ರೀಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವವು 2025 ನೇ ಫೆಬ್ರವರಿ 2 ಮತ್ತು 3 ರಂದು ನಡೆಯಲಿದ್ದು, ಆಮಂತ್ರಣ ಬಿಡುಗಡೆ ಮಂಡೆಕೋಲು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಜ.11ರಂದು ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾ ಸಮಿತಿ ಅಧ್ಯಕ್ಷ ಡಿ.ವಿ. ಸುರೇಶ್ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ
ಕುಶಲಪ್ಪ ಗೌಡ ಬಿಎಸ್ ಎನ್.ಎಲ್., ಆಡಳಿತ ಸಮಿತಿ ಅಧ್ಯಕ್ಷ ಚಂದ್ರಜಿತ್ ಮಾವಂಜಿ,
ಸಮಿತಿಗಳ ಪದಾಧಿಕಾರಿಗಳಾದ ನವೀನ್ ಡಿ ಎಸ್, ಪ್ರದೀಪ್ ಮುರೂರು, ನಾಗೇಶ್ ಗೌಡ ದೇವರ ಗುಂಡ, ಪ್ರಸಾದ್ ಕೊಳಂಬೆ, ಸತ್ಯನಾರಾಯಣ ಶರ್ಮ, ರೇಷ್ಮ ನಾಗೇಶ್, ಚೇತನ ಸುರೇಶ್, ದಿಶನ್ ದೇವರ ಗುಂಡ, ಧವನ್ ದೇವರ ಗುಂಡ ಮೊದಲಾದವರಿದ್ದರು.