ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0


ಆರಂತೋಡು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಜ.13 ರಂದು ಜರುಗಿತು.

ಸಭೆಯಲ್ಲಿ ಮುಖ್ಯವಾಗಿ ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ಅರಂತೋಡು ಅಂಗಡಿ ಮಜಲು ರಸ್ತೆಯ ಕುವೆತ್ ಮಾರ್ ಬಳಿ ರಸ್ತೆಯ ಎರಡು ಬದಿ ಅಪಾಯಕಾರಿ ಕೆರೆಗಳಿದ್ದು ತಾತ್ಕಾಲಿಕವಾಗಿ ತಡೆ ಬೇಲಿ ನಿರ್ಮಿಸಿ ಶಾಶ್ವತವಾಗಿ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಮತ್ತು ತಾತ್ಕಾಲಿಕ ಗ್ರಾಮ ಪಂಚಾಯತ್ ರಸ್ತೆಗಳ ದುರಸ್ತಿಗೆ ಸ್ವಂತ ನಿಧಿಯಿಂದ ಅನುದಾನ ಒದಗಿಸುವುದು, ದೊಡ್ಡ ಕುಮೆರಿ ಭಾಗಕ್ಕೆ ನೈಸರ್ಗಿಕ ನೀರಿನ ಪೈಪಿನ ದುರಸ್ತಿಗೆ ಕ್ರಮ, ಮೋರಿ ಪೈಪ್ ಖರೀದಿ ಮುಂತಾದ ವಿಷಯಗಳು ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಚಿಟ್ಟನೂರ್. ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲ ಬನ, ಶಶಿಧರ ದೊಡ್ಡ ಕಕುಮೇರಿ, ಪುಷ್ಪಾದರ ಕೊಡಂಕೇರಿ , ಶ್ಶ್ವೇತಾ ಅರಮನೆ ಗಾಯ, ಮಾಲಿನಿ ವಿನೋದ್ ಉಳುವಾರು, ವಿನೋದ ವೆಂಕಟ್ರಮಣ ಆಚಾರಿ ತೊಡಿಕಾನ, ಸುಜಯಾ ಲೋಹಿತ್ ಮೇಲಡ್ತಲೆ, ಹರಿಣಿ ದಿನೇಶ್ ದೇರಾಜೆ, ಉಷಾ ಅಡ್ಯಡ್ಕ, ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ.ಆರ್. ಸ್ವಾಗತಿಸಿ, ಸುತ್ತೋಲೆಗಳನ್ನು ಮಂಡಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು.