ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರ ಆಯ್ಕೆಗೆ ಮತದಾನ ಜ.15 ರಂದು ಮುಂಜಾನೆ ಆರಂಭ ಗೊಂಡಿದೆ.
ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2306 ಸದಸ್ಯರು ಮತದಾನ ಆರ್ಹತೆ ಹೊಂದಿದ್ದು , ಒಟ್ಟು 5 ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿಯ ಅಭ್ಯರ್ಥಿಗಳು , ಪಕ್ಷೇತರ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ. ಸಂಜೆ ಮತ ಎಣಿಕೆ ನಡೆಯಲಿದೆ.