ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿ ಶೇಕಡ 100 ಫಲಿತಾಂಶವನ್ನು ಪಡೆದಿರುತ್ತಾರೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಅಮೃತ ಮೋಹನ್, ಅಮೃತ ಸಿ, ಹೋಲಿ, ಮೋಕ್ಷ ರೈ ಸಾನ್ವಿ ,ಸ್ವಸ್ತಿ ವಿಶಿಷ್ಟ ಶ್ರೇಣಿಯಲ್ಲಿ ಧನ್ವಿ ,ಸುದೀಕ್ಷಾ ,ವೈಷ್ಣವಿ, ಮತ್ತು ಶ್ರೀಯ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಿಗೆ ಕುಮಾರಸ್ವಾಮಿ ವಿದ್ಯಾಲಯದ ನೃತ್ಯ ಶಿಕ್ಷಕಿ ನಾಟ್ಯ ವಿದುಷಿ ರಶ್ಮಿ ದಿಲೀಪ್ ರೈ ಮಾರ್ಗದರ್ಶನ ನೀಡಿರುತ್ತಾರೆ.