ಉಗ್ರಾಣ ತುಂಬಿಸಿ ಹಸಿರುವಾಣಿ ಸಮರ್ಪಣೆ
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಇಂದಿನಿಂದ ಆರಂಭಗೊಂಡಿದೆ.
ಸಂಧ್ಯಾ ಕಾಲದಲ್ಲಿ ಕುಂಟಾರು ಕ್ಷೇತ್ರದ ರವೀಶ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಲಿದೆ.

ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಶ್ರೀ ದೇವರಿಗೆ ನಿತ್ಯ ಪೂಜೆಯಾಗಿ ಉಗ್ರಾಣ ತುಂಬಿಸಲಾಯಿತು.
ಬಳಿಕ ಹಸಿರುವಾಣಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,ಶ್ರೀಪತಿ ಬೈಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ ಹಾಗೂ ಸಮಿತಿ ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.