ಕೂತ್ಕುಂಜ ಗ್ರಾಮದ ಪುತ್ಯ ಮನೆ ಧಾರ್ಮಿಕ ಮುಖಂಡ, ದೈವ ಮಧ್ಯಸ್ಥ ತಿಮ್ಮಪ್ಪ ಗೌಡರ ಪತ್ನಿ ಶ್ರೀಮತಿ ಚಂದ್ರಾವತಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಫೆ.15 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು
ಅವರಿಗೆ 72 ವರುಷ ವಯಸ್ಸಾಗಿತ್ತು. ಅವರು ಕೆಲವು ದಿನಗಳ ಹಿಂದಷ್ಟೇ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೆ.15 ರಂದು ವೈದ್ಯರ ಸಲಹೆ ಮೇರೆಗೆ ಮನೆಗೆ ಕರೆ ತಂದಿದ್ದರು.
ಮೃತರು ಪತಿ, ಪುತ್ರ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಸುಬ್ರಹ್ಮಣ್ಯ ಶಾಖೆಯ ಸಿಬ್ಬಂದಿ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ, ಪುತ್ರಿಯರಾದ ಶ್ರೀಮತಿ ರತ್ನಾವತಿ ಕೊಡಿಯಾಲ, ಶ್ರೀಮತಿ ವೇದಾವತಿ ಚಿದ್ಗಲ್ಲು, ಶ್ರೀಮತಿ ದಮಯಂತಿ ಶೇಣಿ, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.