ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಅಧ್ಯಕ್ಷರನ್ನಾಗಿ ಬೊಳ್ಳೂರು ರಾಧಾಕೃಷ್ಣ ಗೌಡ ಅವರನ್ನು ನೇಮಕ ಮಾಡಿದಾಗ ನಮಗೆಲ್ಲಾ ಅತೀವ ಸಂತೋಷವಾಗಿತ್ತು. ಈಗ ತಡೆ ನೀಡಿರುವುದು ಬೇಸರದ ಸಂಗತಿ. ಬೊಳ್ಳೂರು ಅವರಿಗೆ ಆದೇಶವಾದ ಬ್ಲಾಕ್ ಅಧ್ಯಕ್ಷ ಹುದ್ದೆಯನ್ನು ಕೆಲವು ನಾಯಕರು ಕೆಪಿಸಿಸಿ ಅಧ್ಯಕ್ಷರಿಗೆ ಒತ್ತಡ ತಂದು ತಡೆ ನೀಡಿರುವ ವಿಚಾರ ಖಂಡನೀಯವಾದದ್ದು. ಕೂಡಲೇ ತಾತ್ಕಾಲಿಕ ತಡೆಯನ್ನು ಹಿಂಪಡೆಯಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುಳ್ಯ ತಾಲೂಕು ಅಧ್ಯಕ್ಷೀಯ ನೆಲೆಯಲ್ಲಿ ಖಂಡಿಸುತ್ತೇನೆ.
ಜಯಪ್ರಕಾಶ ನೆಕ್ರೆಪ್ಪಾಡಿ, ಕೆ ಡಿ ಪಿ ಸದಸ್ಯರು ಮತ್ತು ಅಧ್ಯಕ್ಷರು ತಾಲೂಕು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸುಳ್ಯ.