Home ಚಿತ್ರವರದಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ವಿಶೇಷಾಧಿಕಾರಿಯಾಗಿ ಪ್ರದೀಪ್ ಕೆ ನೇಮಕ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ವಿಶೇಷಾಧಿಕಾರಿಯಾಗಿ ಪ್ರದೀಪ್ ಕೆ ನೇಮಕ

0

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಿಶೇಷಾಧಿಕಾರಿಯಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪಂಜ ವಲಯ ಮೇಲ್ವಿಚಾರಕರಾದ ಪ್ರದೀಪ್ ಕೆ ಇವರನ್ನು ನೇಮಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದು, ಅವರು ಫೆ. 25 ರಂದು ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಸೇರಿದಂತೆ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸಂಘದ ಚುನಾವಣಾ ಸಂದರ್ಭದಲ್ಲಿ ಸಹಕಾರ ಭಾರತಿ ಬೆಂಬಲಿತರು ಮತ್ತು ಸಹಕಾರ ಸಮನ್ವಯ ಸಮಿತಿಯ ಅಭ್ಯರ್ಥಿಗಳು ಕೋರ್ಟ್ ಮೂಲಕ ಮತದಾನದ ಹಕ್ಕನ್ನು ತಂದು ಮತದಾನ ಚಲಾಯಿಸಿರುವುದರಿಂದ ಫಲಿತಾಂಶ ಪ್ರಕಟಗೊಳ್ಳಲಿಲ್ಲ. ಇದರಿಂದಾಗಿ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದೇ ಇರುವುದರಿಂದ ವಿಶೇಷಾಧಿಕಾರಿಯ ನೇಮಕ ನಡೆದಿದೆ.

NO COMMENTS

error: Content is protected !!
Breaking