ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಜಗದೀಶ್ ಹುದೇರಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಧುಸೂದನ್ ರಾವ್ ಸೂಚಿಸಿ, ವಾಸುದೇವ ರೈ ಅನುಮೋದಿಸಿದರು.
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ರವರ ಉಪಸ್ಥಿಯಲ್ಲಿ ಆಡಳಿತ ಅಧಿಕಾರಿ ದುರ್ಗಪ್ಪರವರು ಅಧಿಕಾರ ಹಸ್ತಾಂತರಿಸಿದ್ದರು.



ಈ ಸಂದರ್ಭದಲ್ಲಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಭುವನೇಶ್ವರ ಪೂದೆ ಮತ್ತು ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
(ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)