ಎಂ. ಪದ್ಮನಾಭನ್ ನಾಯರ್ ಅವರ `ಅಬದ್ಧ ಬದುಕಿನ ಆತ್ಮಕತೆ’ ಕೃತಿ ಬಿಡುಗಡೆ

0

ಎಂ. ಪದ್ಮನಾಭನ್ ನಾಯರ್ ಮಧುವನ ಇವರು ಬರೆದ ನೀಳ್ಗತೆ `ಅಬದ್ಧ ಬದುಕಿನ ಆತ್ಮಕತೆ’ ಕೃತಿಯು ಫೆ.25 ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು.

ಸಂಧ್ಯಾರಶ್ಮಿ ಸಾಹಿತ್ಯ ಸಂಘ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮತ್ತು ಕಸಾಪ ಸುಳ್ಯ ತಾಲೂಕು ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಡಾ. ಕಮಲಾಕ್ಷ ಕೆ. ಕೃತಿ ಬಿಡುಗಡೆ ಮಾಡಿದರು. ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ಬದುಕಿನ ಸಾರ್ಥಕತೆ. ಇದಕ್ಕೆ ಸಾಹಿತ್ಯ, ಸಂಗಿತಗಳು ಪೂರಕ. ಪದ್ಮನಾಭನ್ ನಾಯರ್ ಸಾಹಿತ್ಯ ಲೋಕದಲ್ಲಿ ತನ್ನ ಹೆಸರು ದಾಖಲಿಸುವ ರೀತಿಯಲ್ಲಿ ಕೃತಿ ಹೊರತಂದಿದ್ದಾರೆ ಎಂದರು.


ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕೃತಿ ಪರಿಚಯ ಮಾಡಿದರು. ಪ್ರಸ್ತಾವನೆಗೈದ ಕಥೆಗಾರ, ಶಿಕ್ಷಕ ಡಾ.ಸುಂದರ ಕೇನಾಜೆಯವರು ಈ ಕೃತಿಯು ಸಾಹಿತ್ಯ ಲೋಕದಲ್ಲಿ ಪದ್ಮನಾಭನ್ ನಾಯರ್ ಗಟ್ಟಿ ನೆಲೆಯಾಗಿ ನಿಲ್ಲುವ ಅರ್ಹತೆ ಪಡೆದಿದೆ. ಬರಹಗಾರನಿಗೆ ಭಾಷೆ, ವಯಸ್ಸಿನ ಮಿತಿ ಇಲ್ಲ. ಆತನ ಅನುಭವವು ಇಂತಹ ಕೃತಿಗಳ ಮೂಲಕ ಅಭಿವ್ಯಕ್ತಿಗೊಳ್ಳಬೇಕು ಎಂದು ಹೇಳಿದರು.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ ನಿವೃತ್ತ ಸಿಇಒ ಎಂ.ವಿಶ್ವನಾಥನ್ ನಾಯರ್ ಕೃತಿಕಾರರನ್ನು ಪರಿಚಯಿಸಿದರು. ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ.ಎಸ್.ರಂಗಯ್ಯ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಅಬ್ದುಲ್ಲ ಅರಂತೋಡು ಕಾರ್ಯಕ್ರಮ ನಿರೂಪಿಸಿದರು. ಕೇಶವ ಸಿ.ಎ. ವಂದಿಸಿದರು.