ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕೇಶವ ಗೌಡ ಕುದ್ವ ಅವಿರೋಧ ಆಯ್ಕೆಯಾಗಿದ್ದಾರೆ. ದೇವಳದ ಆಡಳಿತಾಧಿಕಾರಿ, ಪಿ ಡಿ ಒ ಜಯಂತ್ ಯು ಬಿ ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗೌರವ ಸಲಹೆಗಾರ ಮಹೇಶ್ ಕುಮಾರ್ ಕರಿಕ್ಕಳ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗಂಗಾಧರ ಗೌಡ ಗುಂಡಡ್ಕ,ತಾಲೂಕು ಆರಾಧನಾ ಸಮಿತಿ ಸದಸ್ಯ ದಿನೇಶ್ ಪುಂಡಿಮನೆ, ಗ್ರಾಮ ಪಂಚಾಯತ್ ಸದಸ್ಯ ಶರತ್ ಕುದ್ವ, ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರಾದ ಧರ್ಮಪಾಲ. ಕೆ. ಕಂಡೂರು ಮನೆ, ಕಿಶೋರ್ ಕುಮಾರ್ ಪಿ. ಪುಂಡಿ ಮನೆ, ಸಿ. ರವಿಕುಮಾರ್ ಚಳ್ಳಕೋಡಿ, ಲಕ್ಷ್ಮಣ ಕೆ. ಕುಳ್ಳಕೋಡಿ, ಶ್ರೀಮತಿ ಲೀಲಾವತಿ ಅಮೃತ ನಿಲಯ ಅಳ್ಪೆ ಕೋಟಿಯಡ್ಕ, ಜನಾರ್ಧನ ಪೊಳೆಂಜ, ವಿಷ್ಣು ಪೈಂದೋಡಿ (ಪ್ರಧಾನ ಅರ್ಚಕರು) ಉಪಸ್ಥಿತರಿದ್ದರು.
