ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಸಭೆಗೆ ಬರುವಂತೆ ಸಭಿಕರ ಆಗ್ರಹ
ಬಳ್ಪ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ 2ನೇ ಹಂತದ ಗ್ರಾಮಸಭೆ ಫೆ. 25ರಂದು ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜರ ಅಧ್ಯಕ್ಷತೆಯಲ್ಲಿ ಬಳ್ಪ ಸ.ಉ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಸ್ವಾಗತಿಸಿದರು. ಸಿಬ್ಬಂದಿ ಯೋಗೀಶ್ ಕುಳ ವರದಿ ವಾಚಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು ಸಭೆಗೆ ಆಗಮಿಸಿ ಬಳ್ಪ ಗ್ರಾಮವನ್ನು ಕ್ಷಯಮುಕ್ತ ಗ್ರಾಮ ಎಂದು ಘೋಷಿಸಿದರು.

ಬಳ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯ ಬಗ್ಗೆ ಸಮಸ್ಯೆ ತುಂಬಾ ಮಾತನಾಡಲು ಇರುವುದರಿಂದ ಅವರನ್ನು ಸಭೆಗೆ ಬರಲು ಹೇಳಿ. ಕೆ.ಎಸ್. ಆರ್.ಟಿ.ಸಿ. ಅಧಿಕಾರಿಗಳು ಬಾರದೇ ನಾವ್ಯಾರು ಇಲ್ಲಿಂದ ಹೋಗುವುದಿಲ್ಲ ಎಂದು ಮಾಜಿ ಅಧ್ಯಕ್ಷ ಪ್ರಕಾಶ್ ಮುಡ್ನೂರು ಹೇಳಿದರು. ಇದಕ್ಕೆ ಅನೇಕ ಸಭಿಕರು ಧ್ವನಿ ಗೂಡಿಸಿದರು. ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ ಇಲಾಖಾಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿ ಸಭೆಗೆ ಬರುವಂತೆ ತಳಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಪಿ.ಡಿ, ಸದಸ್ಯರಾದ ರಾಜೀವ ಗೌಡ ಕಣ್ಕಲ್, ಚಂದ್ರಶೇಖರ ಅಕ್ಕೇಣಿ, ಪ್ರಶಾಂತ್ ಪೊಟ್ಟುಕೆರೆ, ದಿವಾಕರ ಎಣ್ಣೆಮಜಲು, ಶ್ರೀಮತಿ ಕುಸುಮ ಎಸ್. ರೈ ಗೆಜ್ಜೆ ಶ್ರೀಮತಿ ಶಶಿಕಲಾ ಸೂಂತಾರು, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸವಿತಾ ಸಂಪ್ಯಾಡಿ, ಶ್ರೀಮತಿ ನೇತ್ರಾವತಿ ಹೊಪ್ಪಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.