ಆಧುನಿಕ ಶೈಲಿಗೆ ಅನುಗುಣವಾದ ವಸ್ತ್ರವನ್ನು ಪರಿಚಯಿಸಿದ್ದಾರೆ :ಅಕ್ಷಯ್ ಕೆ ಸಿ
ಯುವ ಉದ್ಯಮಕ್ಕೆ ಸಹಕಾರ ನೀಡಿ :ಡಾ.ಬೀಜದಕಟ್ಟೆ
ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರಿನ ವಾಣೀಜ್ಯ ಸಂಕೀರ್ಣ ಸುಳ್ಯ ಸೆಂಟರ್‌ನಲ್ಲಿ
ಪುರುಷರ ಮತ್ತು ಮಕ್ಕಳ ವಸ್ತ್ರಗಳ ಶೋರೂಮ್ ‘ರಿವೀವ್’ ಫೆ.27ರಂದು ಶುಭಾರಂಭಗೊಂಡಿತು.
. ಭಿನ್ನ ವಿಭಿನ್ನ ಫ್ಯಾಷನ್ ವಸ್ತ್ರಗಳ
ಐಷಾರಾಮಿ ಫ್ಯಾಷನ್ ಬಾಟಿಕ್ ‘ರಿವೀವ್’ ನೂತನ ವಸ್ತ್ರ ಮಳಿಗೆಯನ್ನು ಬೀಜದಕಟ್ಟೆ ಕುಟುಂಬದ ಯಜಮಾನಿ ಮಾತೃಶ್ರೀಯವರಾದ ದಿ| ಸೈದು ಹಾಜಿ ಬೀಜದಕಟ್ಟೆ ಯವರ ಧರ್ಮ ಪತ್ನಿ ಶ್ರೀಮತಿ ಅಸಿಯಮ್ಮ ಸೈದು ಹಾಜಿ ಬೀಜದಕಟ್ಟೆ ಉದ್ಘಾಟಿಸಿದರು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿ ಈಗಿನ ಯುವ ಜನತೆ ಒಳ್ಳೊಳ್ಳೆ ಉದ್ಯಮರಂಗದಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ ಇದೊಂದು ಒಳ್ಳೆಯ ಉದ್ಯಮವನ್ನು ಆರಂಭಿಸಿದದ್ದಾರೆ ಬೀಜದಕಟ್ಟೆ ಕುಟುಂಬದ ಸದಸ್ಯರು ಈ ಉದ್ಯಮದ ಯಶಸ್ವಿಗೆ ಸಹಕರಿಸಿ ಎಂದರು.



ಮುಖ್ಯ ಅತಿಥಿಗಳಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ
ಸದಾನಂದ ಮಾವಜಿ, ಎ.ಓ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ
ಅಕ್ಷಯ್ ಕೆ.ಸಿ., ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ
ಟಿ.ಎಂ. ಶಹೀದ್ ತೆಕ್ಕಿಲ್,
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ,
ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ,
ನಗರ ಪಂಚಾಯತ್ ಸದಸ್ಯರಾದ
ಉಮ್ಮರ್ ಕೆ ಎಸ್,ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್, ಸುಳ್ಯ ತಾಲೂಕು ಸಯಂಕ್ತ ಜಮಾಯತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಚಂದ್ರಶೇಖರ ಬೀಜದಕಟ್ಟೆ,
ಅಬ್ದುಲ್ ಮಜೀದ್ ಜನತಾ,
ಆಲಿಕುಂಞಿ ಹಾಜಿ, ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ಕಲಾಂ ಬೀಜಕೊಚ್ಚಿ, ಪೈಸಲ್ ಕಟ್ಟೆಕಾರ್,ಸಲೀಂ ಪೆರಂಗೊಡಿ, ಹಮೀದ್ ಬೀಜದಕಟ್ಟೆ, ಉಮ್ಮರ್ ಹಾಜಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಗುಂಡಿ, ಲೋಕಯ್ಯ ಗೌಡ, ಬಿ.ಕೆ.ಮೋಹನ ಮೊದಲಾದವರು ಭಾಗವಹಿಸಿದ್ದರು.
ರಿವೀವ್ ವಸ್ತ್ರಮಳಿಗೆಯ ಮಾಲಕರಾದ ರಹೀಂ ಬೀಜದಕಟ್ಟೆ ಹಾಗೂ ಇರ್ಷಾದ್ ಬೀಜಕಟ್ಟೆ ಸರ್ವರನ್ನೂ ಪ್ರೀತಿಯಿಂದ ಬರಮಾಡಿಕೊಂಡರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ,ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕೊಕ್ಕೊ ವಂದಿಸಿದರು.
ಹೊಸ ಫ್ಯಾಷನ್ ಲೋಕ-ರಿವೀವ್:
ಮಕ್ಕಳಿಂದ ಹಿಡಿದು ಎಲ್ಲಾ ಪ್ರಾಯದ ಪುರುಷರಿಗೆ ಆಕರ್ಷಕ ವಸ್ತ್ರಗಳೊಂದಿಗೆ ರಿವೀವ್ ಕೈಬೀಸಿ ಕರೆಯುತಿದೆ.
ಪ್ಯಾಂಟ್, ಶರ್ಟ್, ಕುರ್ತಾ ಶರ್ವಾನಿ, ಪೈಜಾಮ್, ಡ್ರೆಸ್ ಕೋಡ್, ಸೂಟ್, ಶಾಲಾ ಸಮವಸ್ತ್ರಗಳು ಅಲ್ಲದೇ ಪಾರ್ಟಿ ವೇರ್ ಡ್ರೆಸ್‌ಗಳು ಕ್ಲಪ್ತ ಸಮಯಕ್ಕೆ ದೇಹದ ಆಕಾರಕ್ಕೆ ಅನುಗುಣವಾಗಿ ನುರಿತ ಟೈಲರ್‌ಗಳಿಂದ ಅತ್ಯಾಧುನಿಕ ಶೈಲಿಯಲ್ಲಿ ಹೊಲಿದು ಕೊಡಲಾಗುವುದು.
ಮಕ್ಕಳ ರೆಡಿಮೆಡ್ ಬಟ್ಟೆಗಳು ಅತ್ಯಾಧುನಿಕ ಶೈಲಿಯ ಉಡುಗೆ ತೊಡುಗೆಗಳು. ಬ್ರಾಂಡೆಡ್ ಕಂಪನಿ ವಸ್ತ್ರಗಳು ದೊರೆಯುತ್ತದೆ.
ಫ್ಯಾಷನ್, ಡಿಸೈನ್, ಸ್ಟಿಚ್ಚಿಂಗ್:
ಜೀನ್ಸ್, ಟಿ.ಶರ್ಟ್ ಸೇರಿದಂತೆ ವಿವಿಧ ಫ್ಯಾಷನ್ ರೆಡಿಮೇಡ್ ಡ್ರೆಸ್‌ಗಳ ಜೊತೆಗೆ ದೇಹದ ಆಕಾರಕ್ಕೆ ಅಪ್ಪುವ ಮತ್ತು ಮನಸ್ಸಿಗೆ ಒಪ್ಪುವ ವಸ್ತ್ರಗಳನ್ನು ಡಿಸೈನ್ ಮಾಡಿ, ಸ್ಟಿಚ್ ಮಾಡಿ ಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಮಲ್ಟಿ ಬ್ರಾಂಡೆಡ್ ವಸ್ತ್ರಗಳನ್ನು ಡಿಸೈನ್ ಮಾಡಿ ಅನುಭವ ಇರುವ ನುರಿತ ಅನುಭವಿ ಡಿಸೈನರ್ ಮತ್ತು ಹೊಲಿಗೆದಾರರು ಬಟ್ಟೆಗಳನ್ನು ಸಿದ್ಧಪಡಿಸಿ ನೀಡಲಿದ್ದಾರೆ.
ಪ್ಯಾಂಟ್, ಶರ್ಟ್, ಕುರ್ತಾ, ಶೆರ್ವಾನಿ, ಪೈಜಾಮ, ಡ್ರೆಸ್ ಕೋಡ್, ಸೂಟ್, ಶಾಲಾ ಸಮವಸ್ತ್ರಗಳು, ಕಂದೂರ, ಅಲ್ಲದೇ ಮದುವೆ ಡ್ರೆಸ್‌ಗಳು ಅಥವಾ ಇತರ ಯಾವುದೇ ಸಮಾರಂಭಗಳಿಗೆ ಬೇಕಾದ ಬಟ್ಟೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಗ್ರಾಹಕರ ಮನಸ್ಸಿನ ಇಚ್ಛೆಯ ಫ್ಯಾಷನ್‌ನಲ್ಲಿ ತಯಾರು ಮಾಡಿ ಕೊಡಲಾಗುವುದು. ಎಲ್ಲಾ ಪ್ರಸಿದ್ಧ ಬ್ರಾಂಡ್‌ಗಳ ಗುಣಮಟ್ಟದ ಬಟ್ಟೆಗಳು ಇಲ್ಲಿ ಲಭ್ಯವಿದೆ. ಅಲ್ಲದೆ ಅತ್ಯುತ್ತಮ ಗುಣಮಟ್ಟದ ಬೆಲ್ಟ್, ಶೂ, ಕ್ಯಾಪ್ ಸೇರಿದಂತೆ ಇತರ ವಸ್ತುಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ವಸ್ತ್ರೋದ್ಯಮದ ಪರಂಪರೆ ಮತ್ತು ಅನುಭವದ ಹಿನ್ನಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಮತ್ತು ಆಧುನಿಕ ಫ್ಯಾಷನ್ ವಸ್ತ್ರಗಳನ್ನು ನೀಡುವ ಸಂಕಲ್ಪದೊಂದಿಗೆ ಸುಳ್ಯದಲ್ಲಿ ರಿವೀವ್ ವಸ್ತ್ರ ಮಳಿಗೆ ಶುಭಾರಂಭಗೊಂಡಿದೆ ಎಂದು ಮಾಲಕರಾದ ರಹೀಂ ಬೀಜದಕಟ್ಟೆ ಮತ್ತು ಇರ್ಷಾದ್ ಬೀಜದಕಟ್ಟೆ ತಿಳಿಸಿದ್ದಾರೆ.