ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಗೆ ಏಳು ರ‍್ಯಾಂಕುಗಳು

0

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು 2024-25ರ ಸಾಲಿನ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ನ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದು, ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅರ್ಚನಾ ಎನ್.ಕೆ. ಪ್ರಥಮ ರ‍್ಯಾಂಕ್, ದ್ವಿತೀಯ ಬಿ.ಎಸ್ಸಿ.ಯಲ್ಲಿ 1ನೇ ರ‍್ಯಾಂಕ್ ಮತ್ತು ತೃತೀಯ ಬಿ.ಎಸ್ಸಿ.ಯಲ್ಲಿ 2ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅಂಜಲ, ದ್ವಿತೀಯ ಬಿ.ಎಸ್ಸಿ.ಯಲ್ಲಿ 2ನೇ ರ‍್ಯಾಂಕ್ ಮತ್ತು ತೃತೀಯ ಬಿ.ಎಸ್ಸಿ.ಯಲ್ಲಿ 4ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಮೆಡಿಕಲ್‌ ಲ್ಯಾಬೋರೇಟರಿ ಟೆಕ್ನಾಲಜಿ ವಿಭಾಗದ ಭೂಮಿಕಾ ಕೆ., ಪ್ರಥಮ ಬಿ.ಎಸ್ಸಿ.ಯಲ್ಲಿ 10ನೇ ರ‍್ಯಾಂಕ್ ಮತ್ತು ದ್ವಿತೀಯ ಬಿ.ಎಸ್ಸಿ.ಯಲ್ಲಿ 9ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಕಾಲೇಜಿನ ಆಡಳಿತಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿರುತ್ತಾರೆ.