ಸಂಪಾಜೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

0

ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಯು ಫೆ .28 ರಂದು ನಡೆಯಿತು.

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಕಲ್ಲು , ಅಲಡ್ಕ , ಮುಂಡಡ್ಕ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆಯನ್ನು ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೆರವೇರಿಸಿದರು. ಗಡಿಕಲ್ಲು ಅಂಗನವಾಡಿ ಕೇದ್ರಗಳಲ್ಲಿ ಹಾಗೂ ಕಲ್ಲುಗುಂಡಿ ಅಂಗನವಾಡಿ ಕೇಂದ್ರದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯನ್ನು ನೆರವೇರಿಸಿದರು.


ಗ್ರಾಮ ಪಂಚಾಯತ್, ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಆನೆ ಮಲ್ಲಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಕಾಮಗಾರಿ ಕಾಮಗಾರಿಯನ್ನು ಮಾಜಿ ಪಂಚಾಯತ್ ಅಧ್ಯಕ್ಷ ಜಗದೀಶ್ ರೈ ಉದ್ಘಾಟಿಸಿದರು. ಕೈಪಡ್ಕ ಚರಂಡಿ ಕಾಂಕ್ರೀಟ್ ಕಾಮಗಾರಿ ಉದ್ಘಾಟನೆಯನ್ನು ಪಂಚಾಯತ್ ಸದಸ್ಯೆ ವಿಮಲಾ ಪ್ರಸಾದ್‌ ನೆರವೇರಿಸಿದರು.

ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿ ಹಾಗೂ ಚಟ್ಟೆಕಲ್ಲು ಕಾಂಕ್ರೀಟ್ ಚರಂಡಿ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ ಹಾಗೂ ಜಿ. ಕೆ. ಹಮೀದ್ ಗೂನಡ್ಕ ನೆರವೇರಿಸಿದರು.ಕಡೆಪಾಲ ರಸ್ತೆ ಕಾಂಕ್ರಿಟ್ ಕಾಮಗಾರಿ ಹಾಗೂ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಮಾಜಿ ಉಪಾಧ್ಯಕ್ಷೆ ಲಸ್ಸಿ ಮೊನಾಲಿಸಾ ಹಾಗೂ ದಿನಕರ ಗೌಡ ಸಣ್ಣಮನೆ ನೆರವೇರಿಸಿದರು. ಪೆರುಂಗೋಡಿ ಪೇರಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕುಸುಮಾವತಿ ಪುಟ್ಟಯ್ಯ ಗೌಡ ನೆರವೇರಿಸಿದರು. ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕೃಷಿ ಸಖಿ ಮೋಹಿನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರಿ, ರಜನಿ ಶರತ್, ವಿಮಲಾ ಪ್ರಸಾದ್, ವಿಜಯ ಕುಮಾ‌ರ್ ಅಲಡ್ಕ ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಸರೋಜಿನಿ ಕಡೆಪಾಲ, ಕುಸುಮಾವತಿ ಪುಟ್ಟಯ್ಯ, ದಿನಕರ ಗೌಡ ಸಣ್ಣ ಮನೆ ಮಹಮ್ಮದ್ ಕುಂಞಿ, ಉಪ್ಪಿ ಅಬ್ದುಲ್ ರಹಿಮಾನ್ ಸಂಪಾಜೆ, ಬಿ, ಟಿ. ಬಷೀರ್, ಇಸ್ಮಾಯಿಲ್ ಏಸ್. ಪಿ, ಮಹಮ್ಮದ್ ಎಸ್ ಎಂ. ಹ್ಯಾರಿಸ್ ಸಂಪಾಜೆ, ಪ್ರಸಾದ್ ಕಲ್ಲುಗುಂಡಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಜನಾರ್ದನ ಗೌಡ ಪೇರಡ್ಕ, ವಿಶ್ವನಾಥ್‌ ಗೌಡ ಸರೋಜಿನಿ ಕಡೆಪಾಲ ಮೊದಲಾದವರು ಉಪಸ್ಥಿತರಿದ್ದರು.