ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿ ಪಕ್ಷದ ಸಕ್ರಿಯ ಸದಸ್ಯ ಐನೆಕಿದು ಗ್ರಾಮದ ನವೀನ್ ಕಟ್ರಮನೆ ನಿಧನರಾಗಿರುವುದಾಗಿ ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಅಸೌಖ್ಯತೆ ಉಂಟಾಗಿದ್ದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯಕ್ಕೆ ಕರೆದೊಯ್ದಾಗ ಚಿಕಿತ್ಸೆ ಸಿಗಲಿಲ್ಲವೆನ್ನಲಾಗಿದ್ದು , ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಅವರು ನಿಧನರಾಗಿದ್ದು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಫುಡ್ ಪಾಯಿಸನ್ ಉಂಟಾದ ಪರಿಣಾಮವಾಗಿ ಅವರಿಗೆ ಜ್ವರ ಬಂದು ಅಸ್ವಸ್ಥತೆಗೊಳಗಾದರೆಂದು ಹೇಳಲಾಗಿದ್ದು, ಪೋಲೀಸ್ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಅವರಿಗೆ 48 ವರ್ಷ ವಯಸ್ಸಾಗಿತ್ತು.