ಗುತ್ತಿಗಾರು ಗ್ರಾಮ ಸಭೆ

0

ಗುತ್ತಿಗಾರು ಚರಂಡಿಯಲ್ಲಿ ಕೊಳಚೆ ನೀರು, ಕುಡಿಯುವ ನೀರಿನ ಬಗ್ಗೆ, ರಸ್ತೆ ಬದಿ ಗಿಡ, ಗ್ರಾಮ ಲೆಕ್ಕಾಧಿಕಾರಿ ಅಡಿ ಸ್ಥಳ ಬಗ್ಗೆ ಚರ್ಚೆ

ಗುತ್ತಿಗಾರು ಗ್ತಾ.ಪಂ ನ ಗ್ತಾಮ ಸಭೆ ಮಾ.3 ರಂದು ಗ್ರಾ.ಪಂ ನ ಪ.ವರ್ಗದ ಸಭಾಭವನದಲ್ಲಿ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಶ್ರೀಮತಿ ಸುಮಿತ್ರಾ ಮೂಕಮಲೆ ವಹಿಸಿದ್ದರು, ನೊಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಸದಸ್ಯರಗಳಾದ ವೆಂಕಟ್ ವಳಲಂಬೆ, ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ವಿನಯ ಸಾಲ್ತಾಡಿ, ಜಗದೀಶ್ ಬಾಕಿಲ, ಮಾಯಿಲಪ್ಪ ಕೊಂಬೊಟ್ಟು, ಶಾರದ ಮುತ್ಲಾಜೆ, ಮಂಜುಳಾ ಮುತ್ಲಾಜೆ, ಲತಾಕುಮಾರಿ ಆಜಡ್ಕ, ರೇವತಿ ಆಚಳ್ಲಿ, ಅನಿತಾ ಕುಮಾರಿ, ಲೀಲಾವತಿ ಅಂಜೇರಿ, ಪ್ರಮೀಳಾ ಎರ್ದಡ್ಕ ಉಪಸ್ಥಿತರಿದ್ದರು. ವೇದಿಕೆಯಲ್ಲಿ
ಪಿಡಿಒ ಧನಪತಿ ಉಪಸ್ಥಿತರಿದ್ದರು.


ಗ್ರಾ.ಪಂ ಸಿಬ್ಬಂದಿ ಅನಿತಾ ವರದಿ ವಾಚಿಸಿದರು. ತೇಜಾವತಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ಸಭೆಯಲ್ಲಿ ಚರಂಡಿಯಲ್ಲಿ ಕೊಳಚೆ ನೀರು, ಕುಡಿಯುವ ನೀರಿನ ಬಗ್ಗೆ, ರಸ್ತೆ ಬದಿ ಗಿಡ, ಗ್ರಾಮ ಲೆಕ್ಕಾಧಿಕಾರಿ ಅಡಿಸ್ಥಳ ಬಗ್ಗೆ ಚರ್ಚೆ ನಡೆಯಿತು.