ಕಲ್ಚರ್ಪೆ ಬಳಿ ಕಾರು ಮತ್ತು ದೋಸ್ತ್ ವಾಹನದ ನಡುವೆ ಅಪಘಾತ : ಕಾರಿನಲ್ಲಿದ್ದ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯ- ಆಸ್ಪತ್ರೆಗೆ ದಾಖಲು

0

ಮಾಣಿ ಮೈಸೂರು ಹೆದ್ದಾರಿ ಕಲ್ಚರ್ಪೆ ಸಮೀಪ ಕಾರು ಮತ್ತು ದೋಸ್ತ್ ವಾಹನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಸುಮಾರು ೪ ಮಂದಿಗೆ ಸಣ್ಣ ಪುಟ್ಟ ಗಾಯವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಇದೀಗ ವರದಿಯಾಗಿದೆ.

ಸುಬ್ರಹ್ಮಣ್ಯದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಕಲ್ಚರ್ಪೆ ಬಳಿ ಬರುತ್ತಿದ್ದಂತೆ ಕಲ್ಚರ್ಪೆ ರಸ್ತೆ ಬದಿ ನಿಲ್ಲಿಸಿದ್ದ ದೋಸ್ತ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಯಿತು.


ಗಾಯ ಗೊಂಡವರು ಮೈಸೂರು ಮೂಲದರಾಗಿದ್ದು, ಘಟನೆ ನಡೆದ ಕೂಡಲೇ ಸುಳ್ಯದ ಶಿವ ಆಂಬುಲೆನ್ಸ್, ಲೈಫ್ ಕೇರ್ ಆಂಬುಲೆನ್ಸ್, ಮತ್ತು ಅರಂತೋಡಿನ ಆಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತರಲಾಗಿದೆ.