
ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಎರಡನೇಯ ದಿನದಂದು ರಾತ್ರಿ ದೀಪಾರಾಧನೆಯೊಂದಿಗೆ ತಾಯಂಬಕವಾಗಿ ಶ್ರೀ ದೇವರ ಭೂತ ಬಲಿ ಉತ್ಸವ ಹಾಗೂ ವಸಂತಕಟ್ಟೆ ಪೂಜೆಯು ನಡೆಯಿತು. ಬಳಿಕ ವಿಶೇಷವಾಗಿ ಶ್ರೀ ದೇವರ ನೃತ್ಯ ಬಲಿ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ಭಕ್ತಾದಿಗಳು ಆಗಮಿಸಿ ಉತ್ಸವದಲ್ಲಿ ಭಾಗವಹಿಸಿದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು.ನಂತರ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು.
