ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರ: 1992 ವಿದ್ಯಾರ್ಥಿಗಳು
2025ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು ಮಾ.21ರಿಂದ ಆರಂಭಗೊಂಡು, ಎ.4ರವರೆಗೆ ನಡೆಯುವುದು. ಸುಳ್ಯ ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಬಾರಿ ತಾಲೂಕಿನಿಂದ 1992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಡೆಲ್ ಅಧಿಕಾರಿಯಾಗಿರುವ ಶ್ರೀಮತಿ ಆಶಾ ನಾಯಕ್ ತಿಳಿಸಿದ್ದಾರೆ.
6 ಪರೀಕ್ಷಾ ಕೇಂದ್ರಗಳು- 1992 ವಿದ್ಯಾರ್ಥಿಗಳು:
ಸುಳ್ಯ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ಸುಳ್ಯ ನಗರದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ 475 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಚೇರಿಯ ಮುಖ್ಯ ಅಧೀಕ್ಷಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಹಾಗೂ ಉಪ ಮುಖ್ಯ
ಅಧೀಕ್ಷಕರಾಗಿ ಎಲಿಮಲೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಕುಮಾರ್ ಕಾರ್ಯ ನಿರ್ವಹಿಸಲಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆ ಗಾಂಧಿನಗರದಲ್ಲಿ 264 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ದ್ದಾರೆ. ಇಲ್ಲಿ ಸಂಪಾಜೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಎನ್.ಕೆ.ಯವರು ಮುಖ್ಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸುಳ್ಯ ಬೀರಮಂಗಲ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ 310 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇಲ್ಲಿ ಅಜ್ಜಾವರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ ಎಂ ಮುಖ್ಯ ಅಧೀಕ್ಷಕರಾಗಿರುತ್ತಾರೆ. ಅರಂ ತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ -172 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿಯ ಹಿರಿಯ ಸಹ ಶಿಕ್ಷಕ ಸೋಮಶೇಖರ ಪಿ ಯವರು ಮುಖ್ಯ ಅಧೀಕ್ಷರಾಗಿರುತ್ತಾರೆ. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆ ಇಲ್ಲಿ – 349 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಮುಖ್ಯ ಅಧೀ ಕ್ಷಕರಾಗಿ ಬೆಳ್ಳಾರೆ ಕೆಪಿಎಸ್‌ನ ಉಪ ಪ್ರಾಂಶುಪಾಲೆ ಉಮಾಕುಮಾರಿಯವರು ಕರ್ತವ್ಯ ನಿರ್ವ ಹಿಸಲಿದ್ದಾರೆ. ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಇಲ್ಲಿ – 422 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇಲ್ಲಿ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಹಿರಿಯ ಸಹ ಶಿಕ್ಷಕಿ ನಂದಾ ಮುಖ್ಯ ಅಧೀಕ್ಷರಾಗಿರುತ್ತಾರೆ. ಎಣ್ಮೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟೈಟಸ್ ವರ್ಗಿಸ್ ಉಪ ಅಧೀಕ್ಷಕರಾಗಿರುತ್ತಾರೆ.
ಸುಳ್ಯ ತಾಲೂಕಿನ 36 ಪ್ರೌಢಶಾಲೆಗಳಿಂದ 1882 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಹೊಸ ಖಾಸಗಿ ಅಭ್ಯರ್ಥಿಗಳಾಗಿ 71 ಮಂದಿ, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು 25 ಹಾಗೂ ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳು 14 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಹೀಗೆ ಒಟ್ಟು 1992 ಮಂದಿ ಪರೀಕ್ಷೆ ಬರೆಯುವರು.
ಹಾಲ್ಟಿಕೇಟ್ ಕಡ್ಡಾಯ:
ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಶಿಕ್ಷಣ ಇಲಾಖೆಯಿಂದ ಹಾಲ್ ಟಿಕೇಟ್ ನೀಡಲಾಗಿದೆ. ಪರೀಕ್ಷೆ ಬರೆಯಲು ಬರುವಾಗ ಹಾಲ್‌ಟಿಕೇಟನ್ನು ತೆಗೆದುಕೊಂಡು ಬರಬೇಕು. ಒಂದು ವೇಳೆ ಮರೆತು ಬಂದರೆ ವಿದ್ಯಾರ್ಥಿಗಳು ಗಡಿಬಿಡಿ ಮಾಡುವ ಅಗತ್ಯ ಇಲ್ಲ. ಪರೀಕ್ಷಾ ಕೇಂದ್ರದಲ್ಲಿ ನೇಮಿಸಲಾಗಿರುವ ಮುಖ್ಯ ಅಧೀಕ್ಷಕರನ್ನು ಭೇಟಿಯಾದರೆ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡುತ್ತಾರೆ.
ಬಸ್ ಫ್ರಿ :
ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಉಚಿತವಾಗಿ ರುತ್ತದೆ. ವಿದ್ಯಾರ್ಥಿಗಳು ಹಾಲ್‌ಟಿಕೇಟನ್ನು ತೋರಿಸಿದರೆ ಉಚಿತ ಪ್ರಯಾಣ ಮಾಡಬಹು ದಾಗಿದೆ. ಪರೀಕ್ಷಾ ಕೊಠಡಿಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅಸೌಖ್ಯ ಇರುವ ವಿದ್ಯಾರ್ಥಿಗಳಿಗೆ, ವಿಶೇಷ ಸಾಮರ್ಥ್ಯ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ವೇಳಾಪಟ್ಟಿ
ಮಾ.21- ಪ್ರಥಮ ಭಾಷೆ | ಮಾ.24-ಗಣಿತ
ಮಾ.26 – ದ್ವಿತೀಯ ಭಾಷೆ | ಮಾ.29 -ಸಮಾಜ ವಿಜ್ಞಾನ
ಎ.2- ವಿಜ್ಞಾನ | ಎ.4 – ತೃತೀಯ ಭಾಷೆ