ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ 18 ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಿಕೊಂಡು ಎಲೆಮರೆಯ ಕಾಯಿಯಂತಿರುವ ಮಹಾಲಿಂಗ ಪಾಟಾಳಿ ಜಯನಗರ ಇವರನ್ನು ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜಯನಗರ ಅಂಗನವಾಡಿ ಕೇಂದ್ರದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಸುರೇಂದ್ರ ಕಾಮತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗಜಾನನ ಭಜನಾಮಂದಿರದ ಮಾಜಿ ಅಧ್ಯಕ್ಷರಾದ ಕುಸುಮಾಧರ ಕೆ.ಜಿ ಹಾಗೂ ಜೇಸಿಐ ಸುಳ್ಯ ಪಯಸ್ವಿನಿ ಸ್ಥಾಪಕಾಧ್ಯಕ್ಷರಾದ ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ತಿರುಮಲೇಶ್ವರಿ ಹಾಗೂ ಸಹಾಯಕಿ, ಸ್ಥಳೀಯ ಮುಖಂಡರಾದ ರಾಧಾಕೃಷ್ಣ ನಾಯಕ್ ಜಯನಗರ, ಜೇಸಿಐ ಸುಳ್ಯ ಪಯಸ್ವಿನಿ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ್ ಜಯನಗರ, ಜಯನಗರ ಯುವಕಮಂಡಲದ ಮಾಜಿ ಅಧ್ಯಕ್ಷ ಸುರೇಂದ್ರ ಕಾಮತ್ ಹಾಗೂ ಸ್ಥಳೀಯರು, ಅಂಗನವಾಡಿ ಪುಟಾಣಿಗಳು, ಪೋಷಕರು ಹಾಜರಿದ್ದರು.