ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಜಾಲ್ಸೂರು ಘಟಕ (ಬಿ.ಎಂ.ಎಸ್. ಸಂಯೋಜಿತ) ಇದರ ವಾರ್ಷಿಕ ಮಹಾಸಭೆಯು ಶ್ರೀಗುರುರಾಘವೇಂದ್ರ ಸಭಾಭವನದಲ್ಲಿ ಮಾ.೨೦ರಂದು ನಡೆಯಿತು.
ಈ ಸಂದರ್ಭದಲ್ಲಿ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಜಾಲ್ಸೂರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿ.ಗೋಪಾಲ ಪದವು ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕರುಣಾಕರ ಗೌಡ ಕಾಡುಸೊರಂಜ, , ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಹಾಬಲಡ್ಕ, ಜತೆ ಕಾರ್ಯದರ್ಶಿಯಾಗಿ ಕುಮಾರ ಸುಬ್ರಹ್ಮಣ್ಯ ಬೇರ್ಪಡ್ಕ, ಕೋಶಾಧಿಕಾರಿಯಾಗಿ ಯಶವಂತ ಮುರೂರು ಆಯ್ಕೆಗೊಂಡರು. ನಿರ್ದೇಶಕರಾಗಿ ಅಡ್ಕಾರು ಪದವು ಸುರೇಶ್ ಕಾಳಮನೆ, ಕನಕಮಜಲು ಲೋಕೇಶ್ ಬೆಳ್ಳಿಪ್ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸತೀರ್ಶ ಜಾಲ್ಸೂರು ಆಯ್ಕೆಯಾದರು.