ಶ್ರೀಸ ಟ್ರೋಫಿ- 2025
ಶ್ರೀಸ ಆಲೆಟ್ಟಿ ಇದರ ಆಶ್ರಯದಲ್ಲಿ ದಿ.ಅಶೋಕ ಆಲೆಟ್ಟಿ ಯವರ ಸ್ಮರಣಾರ್ಥವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ 12 ತಂಡಗಳ ಅಂಡರ್ ಆರ್ಮ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಎ. 5 ಮತ್ತು 6 ರಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನಕೊಡಿಯಾಲಬೈಲಿನಲ್ಲಿನಡೆಯಲಿರುವುದು.
ಬೆಳಗ್ಗೆ 10 ಗಂಟೆಗೆ ಪಂದ್ಯಾಟದಉದ್ಘಾಟನಾ ಸಮಾರಂಭವುನಡೆಯಲಿದ್ದು ಪ್ರಗತಿಪರ ಕೃಷಿಕರು, ಉದ್ಯಮಿಗಳಾದ ಅಶೋಕ್ ಪ್ರಭು ರವರು ಪಂದ್ಯಾಟದ ಉದ್ಘಾಟನೆ ನೆರವೇರಿಸಲಿದ್ದಾರೆ.
ಶ್ರೀಸ ಆಲೆಟ್ಟಿ ಇದರ ಅಧ್ಯಕ್ಷ ಲವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮುತ್ತಪ್ಪ ಪೂಜಾರಿ ಮೊರಂಗಲ್ಲು, ತೀರ್ಥಕುಮಾರ್ ಕುಂಚಡ್ಕ,ಪುರುಷೋತ್ತಮ ಕೋಲ್ಚಾರು, ಡಿ.ಕೆ ಅವಿನಾಶ್, ಶಿವಪ್ರಸಾದ್ ಆಲೆಟ್ಟಿಉಪಸ್ಥಿತರಿರುವರು.
ಎರಡು ದಿನಗಳ
ಕಾಲ ನಡೆಯಲಿರುವ ಪಂದ್ಯಾಟದಲ್ಲಿ 12 ತಂಡಗಳುಭಾಗವಹಿಸಲಿದ್ದು ವಿಜೇತ ತಂಡಗಳಿಗೆ ಪ್ರಥಮರೂ50,050/-
ಮತ್ತು ಶಾಶ್ವತ ಫಲಕ, ದ್ವಿತೀಯ ರೂ.30,030/- ಮತ್ತು ಶಾಶ್ವತ ಫಲಕ ಹಾಗೂ ಫೈನಲ್ ಪಂದ್ಯದ ಎಲ್ಲಾ ಆಟಗಾರರಿಗೆ ತಲಾ 5 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು. ಅಲ್ಲದೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಎ.6 ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಆಲೆಟ್ಟಿ ಗ್ರಾಮದ ಹಿರಿಯ ಕ್ರಿಕೆಟ್ ಆಟಗಾರರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವು ನಡೆಯಲಿದೆ.