Home Uncategorized ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಸ್ಮಾರ್ಟ್ ಕ್ಲಾಸ್‌ಗೆ ಸುಳ್ಯ ಲಯನ್ಸ್ ಕ್ಲಬ್‌ನಿಂದ ಕೊಡುಗೆ

ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಸ್ಮಾರ್ಟ್ ಕ್ಲಾಸ್‌ಗೆ ಸುಳ್ಯ ಲಯನ್ಸ್ ಕ್ಲಬ್‌ನಿಂದ ಕೊಡುಗೆ

0

ಸುಳ್ಯ ಲಯನ್ಸ್ ಕ್ಲಬ್‌ನಿಂದ ಮಾ. 22ರಂದು ಲಯನ್ಸ್ ಜಿಲ್ಲಾ ಗವರ್ನರ್‌ನ ಅಧಿಕೃತ ಭೇಟಿಯ ಸಂದರ್ಭದಲ್ಲಿ ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿಗೆ ಸ್ಮಾರ್ಟ್ ಕ್ಲಾಸ್‌ಗಾಗಿ ಸ್ಮಾರ್ಟ್ ಟಿವಿ ಮತ್ತು4೦ ಚಯರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಕೊಡುಗೆಯನ್ನು ಲಯನ್ಸ್ ಜಿಲ್ಲಾ ಗರ್ವನರ್ ಲ.ಭಾರತಿ ಬಿ.ಎಂ. ಪಿಎಂಜೆಫ್ ಡಿ-8 ಇವರು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.2023-24 ನೇ ಸಾಲಿನಲ್ಲಿ ಪ್ರಾಂತೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್‌ನಿಂದ ಎಲ್‌ಸಿಐಎಫ್‌ಗೆ 6೦೦೦ ಡಾಲರ್ ನೀಡುವಲ್ಲಿ ಲ. ರೇಣುಕಾ ಸದಾನಂದ ಜಾಕೆ ಎಂಜೆಎಫ್‌ರವರು ಶ್ರಮ ವಹಿಸಿದ್ದರು.


ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್‌ನ ಪೂವಾಧ್ಯಕ್ಷ ಲ. ಜಾಕೆ ಸದಾನಂದ ಎಂಜೆಎಫ್, ಮಾಜಿ ಪ್ರಾಂತೀಯ ಅಧ್ಯಕ್ಷ ಲ. ಪ್ರೊ. ಬಾಲಚಂದ್ರ ಗೌಡ ಎಂಜೆಎಫ್, ಸ್ಥಾಪಕ ಸದಸ್ಯರಾದ ಲ. ಜಾನ್ ವಿಲಿಯಂ ಲಸ್ರಾದೋ ಎಂಜೆಎಫ್, ಸದಸ್ಯರಾದ ಲ. ಡಾ.ಲಕ್ಷ್ಮೀಶ್ ಕೆ.ಎಸ್. ಎಂಜೆಎಫ್, ಲಯನೇತರರಾದ ಆರ್.ಕೆ. ನಾಯರ್ ಮತ್ತು ಪ್ರಸ್ತುತ ಅಧ್ಯಕ್ಷರಾಗಿರುವ ಲ. ರಾಮಕೃಷ್ಣ ರೈ ಎಂಜೆಎಫ್., ಸೇರಿದಂತೆ ಒಟ್ಟು 6 ಮಂದಿ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಫೌಂಡೇಶನ್‌ಗೆ ಒಂದೊಂದು ಸಾವಿರ ಡಾಲರ್‌ನ ಹಾಗೆ ಒಟ್ಟು ೬೦೦೦ ಡಾಲರ್ ಅನ್ನು ಅಂತರಾಷ್ಟ್ರೀಯ ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದರು. ಈ ಕೊಡುಗೆಯನ್ನು ಪರಿಗಣಿಸಿ ಅಂತರಾಷ್ಟ್ರೀಯ ಸಂಸ್ಥೆ ಶೇ. 15ನ್ನು ಅನುದಾನವಾಗಿ ಸೇವಾ ಚಟುವಟಿಕೆಗೆ ನೀಡಿದೆ. ಪ್ರಾಜೆಕ್ಟ್ ಚೇರ್‌ಪರ್ಸನ್ ಲ. ರೇಣುಕಾ ಸದಾನಂದ ಜಾಕೆ ಎಂಜೆಎಫ್ ಹಾಗೂ ಅಧ್ಯಕ್ಷ ಲ ರಾಮಕೃಷ್ಣ ರೈ ಎಂಜೆಎಫ್ ಶ್ರಮವಹಿಸಿ ಅನುದಾನ ತರಿಸುವಲ್ಲಿ ಪ್ರಯತ್ನಿಸಿದ್ದರು. ಈಗಾಗಲೇ ಅನುದಾನ ಬೊಂಬಾಯಿ ಆಫೀಸ್‌ಗೆ ತಲುಪಿದ್ದು, ಎಪ್ರಿಲ್ ತಿಂಗಳಲ್ಲಿ ಕೈಸೇರಲಿದೆ. ಈ ಕಾರ್ಯ ಯೋಜನೆಗೆ ಸುಮಾರು 75೦೦೦ ಖರ್ಚಾಗಿದ್ದು, ಅಂತರಾಷ್ಟ್ರೀಯ ಸಂಸ್ಥೆಯಿಂದ ೬೨೬೦೦ ಈ ಯೋಜನೆಗೆ ದೊರೆಯಲಿದೆ.


ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ. ರಾಮಕೃಷ್ಣ ರೈ ಎಂಜೆಎಫ್ ವಹಿಸಿ ಸ್ವಾಗತಿಸಿದರು. ಶಾಲಾ ಸಂಚಾಲಕ ಲ. ಜಾಕೆ ಸದಾನಂದ ಎಂಜೆಎಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಲ. ಭಾರತಿ ಬಿ.ಎನ್.ರವರು ಕೊಡುಗೆಗಳನ್ನು ಶ್ಲಾಘಿಸಿ ಸ್ಪೂರ್ತಿಯ ಮಾತುಗಳನ್ನಾಡಿದರು.


ಈ ಸಂದರ್ಭದಲ್ಲಿ ಅತಿಥಿಗಳನ್ನು ಹಾಗೂ ಕೊಡುಗೆಗೆ ಸಹಕರಿಸಿದವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲ. ಗೀತಾ ರಾವ್ ಪಿಎಂಜೆಎಫ್, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಲ. ದೇರಣ್ಣ ಗೌಡ ಅಡ್ಡಂತ್ತಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲತಾ, ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಲಯನ್ಸ್, ಸದಸ್ಯರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರಾದ ಕು. ಅನನ್ಯಾ, ಕು. ಮೇಘಶ್ರೀ ಮತ್ತು ಕು. ದೀಪಿಕಾ ಪ್ರಾರ್ಥಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ವಂದಿಸಿದರು.

NO COMMENTS

error: Content is protected !!
Breaking