ಪಂಜುರ್ಲಿ , ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ
ದ.ಕ ಸಂಪಾಜೆ ಗ್ರಾಮದಲ್ಲಿ ವರ್ಷo ಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ಮಾರ್ಚ್ 28,29,30 ರಂದು ವಿಜೃಂಭಣೆಯಿಂದ ನಡೆಯಲಿದೆ.
ಮಾ 21 ರಂದು ಗೊನೆ ಕಡಿಯುವುದು, 27 ರಂದು ಬೆಳಿಗ್ಗೆ 5:30 ಕ್ಕೆ ದೈವಸ್ಥಾನದಲ್ಲಿ ಗಣಹೋಮ ನಡೆಯಲಿದೆ.
ಮಾ 28 ರಂದು ರಾತ್ರಿ 7 ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ರಾತ್ರಿ 8:30 ಕ್ಕೆ ಮೇಲೇರಿಗೆ ಆಗ್ನಿ ಸ್ಪರ್ಶ, ರಾತ್ರಿ 12 ಕ್ಕೆ ಕುಲ್ಚಾಟ ಹೊರಡುವುದು. ಮಾರ್ಚ್ 29 ರಂದು ಬೆಳಿಗ್ಗೆ 6 ಗಂಟೆಗೆ ಮಹಾವಿಷ್ಣು ಮೂರ್ತಿ ದೈವದ ಅಗ್ನಿ ಪ್ರವೇಶ, ಪ್ರಸಾದ ವಿತರಣೆ , ಪೂರ್ವಾಹ್ನ 8 ಕ್ಕೆ ಮಾರಿಕಳ ಪ್ರವೇಶ , ಬಳಿಕ ಹರಕೆಯ ಸುರಿಗೆಗಳನ್ನು ಒಪ್ಪಿಸುವುದು ಹಾಗೂ ಪ್ರಸಾದ ವಿತರಣೆ ನಡೆಯುವುದು.
ಮಾರ್ಚ್ 30 ರಂದು ಮಧ್ಯಾಹ್ನ 1 ಗಂಟೆಗೆ ಪಂಜುರ್ಲಿ , ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಸಮ್ಮಾನ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಊರ – ಪರವೂರಿನಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೈವದ ಅರಶಿನ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಸಮಿತಿ,ಪದಾಧಿಕಾರಿಗಳು , ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.