ಏ.22ರಿಂದ ಏ.23 ರ ತನಕ ಜಾತ್ರೋತ್ಸವ
ಐತಿಹಾಸಿಕ ಪುಣ್ಯಕ್ಷೇತ್ರ ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, -ಉಳ್ಳಾಲ್ತಿ, ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ- 2025 ನೇ ಸಾಲಿನ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಾ.20 ರಂದು ಶ್ರೀ ಉಳ್ಳಾಕುಲು-ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಪಂಜ ಧರ್ಮಶ್ರೀ ಕಾಂಪ್ಲೆಕ್ಸ್ ಮ್ಹಾಲಕರಾದ ಅಶೋಕ್ ಮೇಲ್ಪಾಡಿ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅಥಿತಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿದ್ದರು.
ಶ್ರೀ ಉಳ್ಳಾಕುಲು-ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಭರತ್ ರಾಮತೋಟ, ಉತ್ಸವ ಸಮಿತಿಯ ಅಧ್ಯಕ್ಷರಾದ ಕುಸುಮಾಧರ ಕೆರೆಯಡ್ಕ, ಪ್ರಧಾನ ದೈವ ಪರಿಚಾರಕರಾದ ಚಂದ್ರಶೇಖರ ಕೋಡಿ ಹಾಗೂ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಏ.22 ರಂದು ಸಂಜೆ ಭಂಡಾರ ತೆಗೆದು ಶ್ರೀ ಅರಸು ಉಳ್ಳಾಕಲು ದೈವಗಳ ನೇಮೋತ್ಸವದೊಂದಿಗೆ ಪ್ರಾರಂಭಗೊಂಡು ಮರುದಿನ ಏ.23 ರಂದು ಪ್ರಾತಃಕಾಲ
ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ, ಶ್ರೀ ಉಳ್ಳಾಕುಲು ದೈವಗಳ ನೇಮ ಹಾಗೂ ಪರಿವಾರ ದೈವಗಳ ನೇಮ, ರಾತ್ರಿ ಧರ್ಮದೈವ ಪರಿವಾರ ದೈವಗಳ ನೇಮೋತ್ಸವದೊಂದಿಗೆ ನಡೆಯಲಿದೆ.