Home Uncategorized ಕೆ ವಿ ಜಿ ಪಾಲಿಟೆಕ್ನಿಕ್: “ಯುವ ನಿಧಿ” ಜಾಗೃತಿ ಕಾರ್ಯಕ್ರಮ

ಕೆ ವಿ ಜಿ ಪಾಲಿಟೆಕ್ನಿಕ್: “ಯುವ ನಿಧಿ” ಜಾಗೃತಿ ಕಾರ್ಯಕ್ರಮ

0

ಸರ್ಕಾರವು ಅನೇಕ ಉತ್ತಮ ಯೋಜನೆಗಳನ್ನು ರೂಪಿಸುತ್ತದೆ ಆದರೆ ಅದು ಸರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ ಮರೆಯುತ್ತದೆ ಎಂದು ಕಿ.ವಿ.ಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಹೇಳಿದರು.


ಅವರು ಕೆ.ವಿ.ಜಿ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಿದ “ಯುವ ನಿಧಿ” ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ
ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸದಸ್ಯ ಭವಾನಿ ಶಂಕರ ಕಲ್ಮಡ್ಕ , ಸುಳ್ಯ ತಾಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಉದ್ಯೋಗ ವಿನಿಮಯ ಕಚೇರಿಯ ಸಮಾಲೋಚಕಿ ಹಾಗೂ ತರಬೇತುದಾರೆ ಮಂಜುಷಾ ಯುವ ನಿಧಿ ಯೋಜನೆ ಹಾಗೂ ನೋಂದಾವಣೆ ಬಗ್ಗೆ ಮಾಹಿತಿ ನೀಡಿದರು . ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಐ.ಕ್ಯೂ ಎ.ಸಿ ಸಂಚಾಲಕ ವಿವೇಕ್ ಪಿ ವಂದಿಸಿದರು. ಉಪ ಪ್ರಾಂಶುಪಾಲ ಹರೀಶ್ ಕುಮಾರ್ ಹಾಗೂ ಪ್ಲೇಸ್ ಮೆಂಟ್ ಅಧಿಕಾರಿ ರಂಗಸ್ವಾಮಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking