ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಆಡಳಿತಕ್ಕೊಳಪಟ್ಟ ಕೆಎಫ್ ಡಿ ಸಿ ರಬ್ಬರ್ ತೋಟದ ಒಳಗಿರುವ ಕಟ್ಟೆಯಲ್ಲಿ ಗುಳಿಗ ದೈವದ ನೇಮೋತ್ಸವ ಇಂದು ನಡೆಯಿತು.
ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಗೌರವಾಧ್ಯಕ್ಷ ಸುಂದರ ರಾವ್, ಮಾಜಿ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಶೇಖರ ಕುದ್ಪಾಜೆ, ಗುಳಿಗಕಟ್ಟೆ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ದುಗ್ಗಲಡ್ಕ, ನ.ಪಂ.ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ದುಗ್ಗಲಾಯ ಯುವ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಸಮಿತಿಗಳ ಸದಸ್ಯರು,ಊರ ಭಕ್ತಾದಿಗಳು ಉಪಸ್ಥಿತರಿದ್ದರು.