ಭಾರತ ಸರ್ಕಾರದ ಕುಟುಂಬ ಕಲ್ಯಾಣ ಮತ್ತು ಸಚಿವಾಲಯದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ವು ಇತ್ತೀಚೆಗೆ ನಡೆಸಿದ ವೈದ್ಯಕೀಯ ಜನರಲ್ ಮೆಡಿಸಿನ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವೈದ್ಯಕೀಯ ಜನರಲ್ ಮೆಡಿಸಿನ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
3 ವರ್ಷಗಳ ವೈದ್ಯಕೀಯ ಈ ಕೋರ್ಸ್ ನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಭಾರತ ಸರ್ಕಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯು ನಡೆಸಿದ ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ ಮೆರಿಟ್ ಕೋಟಾದಲ್ಲಿ ಸೀಟ್ ಪಡೆಯುವುದರ ಮೂಲಕ ಪೂರ್ತಿ ಗೊಳಿಸಿದ್ದಾರೆ. ತಮ್ಮ ವೈದ್ಯಕೀಯ ಎಂಬಿಬಿಎಸ್ ಪದವಿಯನ್ನು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜು ಹಿಮ್ಸ್ ನಲ್ಲಿ ಪೂರೈಸಿರುವ ಶ್ರೀ ಯುತರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಮತ್ತು ಮರ್ಕಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ.
ಪದವಿ ಪೂರ್ವ ಶಿಕ್ಷಣ ವನ್ನು ಎನ್ ಎಂ ಪಿಯು ಕಾಲೇಜು ಅರಂತೋಡಿನಲ್ಲಿ ಡಿಸ್ಟ್ಂಗಿಷನ್ ನಲ್ಲಿ ಪೂರ್ತಿಗಳಿಸಿರುವ ಡಾಕ್ಟರ್ ನಿಶಾಂತ್ ಪಿ ಇವರು ನಿವೃತ್ತ ವಿಜ್ಞಾನ ಶಿಕ್ಷಕ ಅಚ್ಯುತ ಪಿ ಮತ್ತು ಶ್ರೀ ಮತಿ ಪುಷ್ಪಾವತಿ ಎ ಇವರ ಪುತ್ರ.