
ದ.ಕ ಜಿಲ್ಲೆಯ ಬಹುಕೋಟಿ ಯೋಜನೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿದೆ ಮತ್ತು ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ ಬಳಿಕ ಮಾ. 21ರಂದು ಗ್ರಾಮೀಣ ಕುಡಿಯುವ ನೀರು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಎಇಇ , ಬಹುಗ್ರಾಮ ಕುಡಿಯುವ ಯೋಜನೆಯ ಪ್ರಮುಖ ಗುತ್ತಿಗೆದಾರ ಕಂಪನಿಯ ಮುಖ್ಯ ಇಂಜಿನಿಯರ್ ತಾಂತ್ರಿಕ ಅಧಿಕಾರಿಗಳು ಕಂಪನಿಯ ಇತರ ಇಂಜಿನಿಯರುಗಳು , ಮರ್ಕಂಜ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಮಗಾರಿ ನಡೆದ ಸ್ಥಳಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಾನಿಯಾಗಿರುವ ಪಂಚಾಯತ್ ರಸ್ತೆ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಚರಂಡಿಗಳನ್ನು ಮತ್ತು ಈ ಮೊದಲೇ ಅಳವಡಿಸಿರುವ ಕುಡಿಯುವ ನೀರಿನ ಪೈಪು ಲೈನ್ ಗಳನ್ನು ಕೂಡಲೇ ದುರಸ್ತಿಪಡಿಸುವ ಬಗ್ಗೆ ಮತ್ತು ದೂಳು ತುಂಬಿರುವ ಕಡೆ ರಸ್ತೆಗೆ ನೀರು ಹಾಕಿ
ಸ್ವಚ್ಚಗೊಳಿಸುವಂತೆ ಕಂಪನಿಯವರು ಒಪ್ಪಿಕೊಂಡಿದ್ದು ಕೂಡಲೇ ಕಾಮಗಾರಿ ನಡೆಸುವಂತೆ ಇಂಜಿನಿಯರ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.