Home Uncategorized ಕರುಣಾಕರ ಗೌಡ ಕಟ್ಟಕ್ಕೋಡಿಯವರಿಗೆ ಸನ್ಮಾನ

ಕರುಣಾಕರ ಗೌಡ ಕಟ್ಟಕ್ಕೋಡಿಯವರಿಗೆ ಸನ್ಮಾನ

0

ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕಡೆಪಾಲ ಇಲ್ಲಿ, ದೈವಸ್ಥಾನದ ನೇಮೋತ್ಸವ ಮತ್ತು ಇತರ ದಿನಗಳಲ್ಲಿ, ಹಗಲಿರುಳೆನ್ನದೆ, ತನ್ನ ಕೆಲಸ ಕಾರ್ಯದ ನಡುವೆಯೂ, ಕಟ್ಟಕ್ಕೋಡಿಯಿಂದ ಆಗಮಿಸಿ, ದೈವಸ್ಥಾನದ ಆಡಳಿತ ಸಮಿತಿಯವರೊಂದಿಗೆ ಕರುಣಾಕರ ಗೌಡ ಕಟ್ಟಕೋಡಿ ಇವರು ಎಲ್ಲಾ ಕೆಲಸ ಕಾರ್ಯದಲ್ಲೂ ಸಂಪೂರ್ಣವಾಗಿ ಸಹಕರಿಸಿದ್ದರು.

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದೈವಸ್ಥಾನದ ಆಡಳಿತ ಮಂಡಳಿಯವರು, ಕಾಲಾವಧಿ ನೇಮೋತ್ಸವದ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಕಾರ್ತಿಕ್ ರೈ ಮಡಿಕೇರಿ, ವರದರಾಜ್ ಗೂನಡ್ಕ, ನಾಗೇಶ್ ಪೇರಲ್, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರಾಜೇಶ್. ಬಿ. ವೈ, ಮತ್ತು ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

NO COMMENTS

error: Content is protected !!
Breaking