ನೆಹರು ಯುವ ಕೇಂದ್ರ ಮತ್ತು ಯುವ ಕಾರ್ಯ ಸಚಿವಾಲಯ ಮಂಗಳೂರು ಮತ್ತು ಮಾನಸ ಮಹಿಳಾ ಮಂಡಲ (ರಿ )ಜಟ್ಟಿಪಳ್ಳ ಇವುಗಳ ಜಂಟಿ ಆಶ್ರಯ ದಲ್ಲಿ ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮ ಜಟ್ಟಿಪಳ್ಳದ ಯುವಸದನ ದಲ್ಲಿ ಮಹಿಳಾ ಮಂಡಲ ದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಯವರ ಅಧ್ಯಕ್ಷತೆ ಯಲ್ಲಿ ಮಾ.22ರಂದು ನಡೆಯಿತು.ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ನೆಹರೂ ಮೆಮೋರಿಯಲ್ ಕಾಲೇಜಿನ ಸಸ್ಯ ಶಾಸ್ತ್ರ ಉಪನ್ಯಾಸಕರಾದ ಕುಲದೀಪ್ ಪೆಲತಡ್ಕ ಜಲ ಸಂರಕ್ಷಣೆ ಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಅತಿಥಿ ಗಳಾಗಿ ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಯವರು ಸಂದರ್ಬೋಚಿತವಾಗಿ ಮಾತನಾಡಿದರು. . ಶ್ರೀಮತಿ ರಂಜಿನಿ ಸಂಜೀವ ಪ್ರಾರ್ಥಿಸಿದರು. ಶ್ರೀಮತಿ ಜಯಂತಿ ಆರ್ ರೈ ಸ್ವಾಗತಿಸಿದರು. ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ಶ್ರೀಮತಿ ಸುನೀತಾ ರಾಮಚಂದ್ರ ವಂದಿಸಿದರು.ಶ್ರೀಮತಿ ಸೌಮ್ಯ ಮಹೇಶ್ ಕಾರ್ಯಕ್ರಮದಲ್ಲಿ ಸಹಕರಿಸಿದರು.
