ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ (MEA) ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಶನ್ MEA ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ಇಂಜಿನಿಯರ್ ಮನ್ವಿತ್ ಯು.ಎಸ್., ಪ್ರೊಡಕ್ಟ್ ಡಿಸೈನರ್ (UX) Alteryx ಕಂಪೆನಿ “Desigining your path: From Engineering to Industrial Design” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಇದರ ಜೊತೆಗೆ ಲಿಂಕ್ ಡೀನ್ ವಿಚಾರದಲ್ಲಿ LinkedIn ಮತ್ತು ಹೇಗೆ ಕೆಲಸ ಮಾಡುವುದೆಂದು ತಿಳಿಸಿಕೊಟ್ಟರು. ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ
ಡಾ. ಉಜ್ವಲ್ ಯು.ಜೆ. ಗೌರವ ಅತಿಥಿ ನೆಲೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಕೂಡಾ Multi-disciplinary ಜಗತ್ತಿಗೆ ತಯಾರಾಗಬೇಕು ಎಂಬ ಸಂದೇಶ ನೀಡಿದರು. ವಿಭಾಗದ ಮುಖ್ಯಸ್ಥರಾದ ಪ್ರೊ. ರಾಘವೇಂದ್ರ ಬಿ. ಕಾಮತ್ ಅವರು Industrial Design ತುಂಬಾ ಉಪಯೋಗಕಾರಿ ಹಾಗೂ ಈ ವಿಷಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಹರ್ಷ ಸ್ವಾಗತಿಸಿ, ಶಿವಪ್ರಸಾದ್ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಾದ ಜೀವಿತ ಮತ್ತು ನಿಶಾ ಜೆ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಸುನಿಲ್ ಕುಮಾರ್ ಎಂ., ಪ್ರೊ. ಅಭಿಜ್ಞ ಬಿ.ಬಿ. ಮತ್ತು ಸುಧೀರ್ ಕೆ.ವಿ. ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.